ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೈಕೋರ್ಟ್‌‌ನಿಂದ 'ಸಿಮಿ' ನಿಷೇಧ ರದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಕೋರ್ಟ್‌‌ನಿಂದ 'ಸಿಮಿ' ನಿಷೇಧ ರದ್ದು Search similar articles
ಭಯೋತ್ಪಾದಕ ಸಂಘಟನೆಯಾಗಿದ್ದ 'ಸಿಮಿ' ಮೇಲಿನ ನಿಷೇಧವನ್ನು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಮಂಗಳವಾರದಂದು ರದ್ದು ಪಡಿಸಿ ಆದೇಶ ನೀಡಿದೆ.

ಸಿಮಿ ಸಂಘಟನೆಯ ಮೇಲಿನ ನಿಷೇಧದ ಕುರಿತಾಗಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲದೇ ಕೇಂದ್ರ ಗೃಹಸಚಿವಾಲಯ ಸಿಮಿ ಸಂಘಟನೆ ನಿಷೇಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಮರ್ಪಕವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಿರುವುದಾಗಿ ನ್ಯಾಯಪೀಠ ಹೇಳಿದೆ.

ಸಿಮಿ ಸಂಘಟನೆ ನಿಷೇಧ ರದ್ದು ಪಡಿಸಿರುವುದರ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿದೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌‌ಮೆಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆ ಕೇಂದ್ರ ಸರ್ಕಾರವೇ ನಿಷೇಧ ಹೇರಿತ್ತು.

ಅಲ್ಲದೇ ಇತ್ತೀಚೆಗೆ ದೇಶಾದ್ಯಂತ ಸಂಭವಿಸಿರುವ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಿಮಿ ಉಗ್ರಗಾಮಿ ಸಂಘಟನೆಯ ಕೈವಾಡ ಇದ್ದಿರುವುದಾಗಿ ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿತ್ತು.
ಮತ್ತಷ್ಟು
ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸದ್ಯವೇ ತೃತೀಯ ರಂಗ ರೂಪುಗೊಳ್ಳಲಿದೆ: ಕಾರಟ್