ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಪ್ಪಂದ ಜಾರಿಗೆ ಅಡೆತಡೆಗಳನ್ನು ದಾಟಬೇಕಿದೆ: ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪ್ಪಂದ ಜಾರಿಗೆ ಅಡೆತಡೆಗಳನ್ನು ದಾಟಬೇಕಿದೆ: ಪಿಎಂ Search similar articles
ಭಾರತ ಅಮೆರಿಕ ಪರಮಾಣು ಒಪ್ಪಂದದ ಹಾದಿಯು ಸುಗಮವಲ್ಲ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಒಪ್ಪಂದ ಪೂರ್ಣವಾಗಬೇಕಾದಲ್ಲಿ ಅನೇಕ ಅಡ್ಡಿ ಅಡಚಣೆಗಳನ್ನು ದಾಟಬೇಕಾಗುತ್ತದೆ ಎಂದು ಹೇಳಿದ್ದಾರೆ.

ಒಪ್ಪಂದ ಕಾರ್ಯಗತಗೊಳ್ಳಲು ಅನೇಕ ಅಡ್ಡಿ ಆತಂಕಗಳಿರುತ್ತವೆ. ಮುಂದಿನ ಹಂತವು ಅಣು ಪೂರೈಕೆ ಸಮೂಹ(ಎನ್ಎಸ್‌ಜಿ) ಅನುಮೋದನೆ ಪಡೆದುಕೊಳ್ಳುವುದಾಗಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅವರು ತನ್ನಪುತ್ರಿ ಉಪಿಂದರ್ ಸಿಂಗ್ ಅವರ ಇತಿಹಾಸ ಪುಸ್ತಕ ಬಿಡುಗಡೆ ಸಮಾರಂಭದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸುರಕ್ಷತಾ ಒಪ್ಪಂದಕ್ಕೆ ಐಎಇಎಯಿಂದ ಅನುಮೋದನೆ ಪಡೆದ ನಂತರ 45 ಸದಸ್ಯರನ್ನೊಳಗೊಂಡ ಎನ್ಎಸ್‌ಜಿಯಲ್ಲಿ ಭಾರತದ ಪರಿಸ್ಥಿತಿ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮೇಲಿನ ಅಭಿಪ್ರಾಯ ತಿಳಿಸಿದ್ದಾರೆ.

ಮೂರು ದಶಕಗಳ ಪ್ರತ್ಯೇಕತೆಯನ್ನು ಅಂತ್ಯಗೊಳಿಸಿ ಪರಮಾಣು ವ್ಯಾಪಾರದ ಆರಂಭಕ್ಕೆ ಎನ್ಎಸ್‌ಜಿ ಸದಸ್ಯ ರಾಷ್ಟ್ರಗಳಿಂದ ಮತ್ತು ಅಮೆರಿಕ ಕಾಂಗ್ರೆಸ್‌ನಿಂದ ನವದೆಹಲಿಯು ಅನುಮೋದನೆ ಪಡೆಯುವ ಅಗತ್ಯವಿದೆ.

ಒಪ್ಪಂದವನ್ನು ಮುಂದುವರಿಸಲು ಭಾರತವು ಎನ್ಎಸ್‌ಜಿಯಿಂದ ಸ್ಪಷ್ಟ ಮತ್ತು ಷರತ್ತುರಹಿತ ಒಪ್ಪಿಗೆಯನ್ನು ನಿರೀಕ್ಷಿಸುತ್ತಿದ್ದು, ಸುರಕ್ಷತಾ ಒಪ್ಪಂದಕ್ಕೆ ಧಕ್ಕೆ ಉಂಟುಮಾಡುವ ಸಂಭಾವ್ಯತೆಯಿರುವಂತಹ ನೂತನ ಷರತ್ತುಗಳನ್ನು ಎನ್ಎಸ್‌ಜಿ ವಿಧಿಸಲಾರದು ಎಂಬ ವಿಶ್ವಾಸವನ್ನು ಭಾರತವು ಹೊಂದಿದೆ ಎಂಬುದಾಗಿ ಪ್ರಧಾನಿ ಸಿಂಗ್ ನುಡಿದರು.
ಮತ್ತಷ್ಟು
ಅಮರನಾಥ: ಪ್ರಧಾನಿಯಿಂದ ಸರ್ವಪಕ್ಷ ಸಭೆ
ಹೈಕೋರ್ಟ್‌‌ನಿಂದ 'ಸಿಮಿ' ನಿಷೇಧ ರದ್ದು
ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?