ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಪ್ಪ-ಅಮ್ಮ ಜಗಳದಲ್ಲಿ ಬಡವಾದ ಕೂಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಪ-ಅಮ್ಮ ಜಗಳದಲ್ಲಿ ಬಡವಾದ ಕೂಸು
ಜೈಪುರ: ಅಪ್ಪ ಅಮ್ಮನ ಜಗಳದಲ್ಲಿ ಅಕ್ಷರಶಃ ಕೂಸೊಂದು ಬಡವಾಗಿರುವ ಸುದ್ದಿಯೊಂದು ಇಲ್ಲಿದೆ. ಕಾನೂನು ಕಟ್ಟಳೆಗಳು ಏನೆಂದೇ ತಿಳಿಯದ ಒಂಭತ್ತು ದಿನಗಳ ಹಸುಳೆ ತನ್ನ ಈರ್ವರು ತಾಯಂದಿರಿಗೆ ಬೇಡವಾಗಿದ್ದಾಳೆ. ತಂದೆ ಮಗುಬೇಕೆಂದು ಹೇಳಿದರೂ, ಅದಕ್ಕೆ ಕಾನೂನು ಅಡ್ಡಿಯಾಗುತ್ತಿದೆ. ಈ ತಾಕಲಾಟಗಳ ನಡುವೆ 'ಪೋಷಕರಹಿತವಾಗಿರುವ' ಮಂಜ್ಹೀ ಎಂಬ ಹೆಣ್ಣು ಶಿಶು ಜೈಪುರದಲ್ಲಿ ಕಾನೂನು ಚೌಕಟ್ಟಿನಲ್ಲಿ 'ಬಂಧಿ'ಯಾಗಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ
ಜಪಾನಿನ ಆ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರು. ಅಂತೆಯೇ ಬಾಡಿಗೆ ತಾಯನ್ನು ಗೊತ್ತು ಮಾಡಿ ಆಕೆ ಗರ್ಭಧರಿಸಿಯೂ ಆಯಿತು. ಆದರೆ ಮಗು ಹುಟ್ಟುವ ತಿಂಗಳ ಮುಂಚಿತ ಗಂಡಹೆಂಡಿರಲ್ಲಿ ವೈಮನಸ್ಸು ಉಂಟಾಗಿ ತಮ್ಮ ಹುಟ್ಟಲಿರುವ ಮಗುವನ್ನೂ ಲೆಕ್ಕಿಸದೆ ವಿವಾಹ ವಿಚ್ಚೇದನ ಪಡೆದಿದ್ದರು.

ಹಾಗಾಗಿ, ಅಹಮದಾಬಾದಿನಲ್ಲಿ ಜನಿಸಿದ ಈ ಅಮಾಯಕ ಕೂಸು ತನ್ನದಲ್ಲದ ತಪ್ಪಿಗೆ ಜೈಪುರದ ಆಸ್ಪತ್ರೆಯೊಂದರ ಆರೈಕೆಯಲ್ಲಿದ್ದು, ಅಮ್ಮಂದಿರೂ ಇಲ್ಲ ಅಪ್ಪನೂ ಇಲ್ಲ ಎಂಬ ಪರಿಸ್ಥಿಗೆ ತಳ್ಳಲ್ಪಟ್ಟಿದೆ. ಜಪಾನ್ ದಂಪತಿಗಳಿಗಾಗಿ ಗರ್ಭಧರಿಸಿರುವ ಬಾಡಿಗೆ ತಾಯಿ ಮಗುವಿನ ಜನನದ ಬಳಿಕ ತನ್ನ 'ಕರ್ತವ್ಯ ಮುಗಿಯಿತು' ಎಂಬಂತೆ ತನಗೆ ಮಗು ಬೇಡ ಅಂದಿದ್ದಾಳೆ.

ಆದರೆ ಮಗುವಿನ ಮೇಲೆ ಮಮತೆ ಇದೆಯಾದರೂ, ಜಪಾನಿ ತಂದೆಗೆ ಕಾನೂನು ಕಟ್ಟಳೆಗಳು ಮಗುವನ್ನು ತನ್ನ ವಶಕ್ಕೆ ಪಡೆಯಲು ಅಡ್ಡಿಯಾಗುತ್ತಿದೆ.

ಜಪಾನಿನಲ್ಲಿ ವೈದ್ಯನಾಗಿರುವ ಯಮಡಾ ಈ ಮಗುವನ್ನು ಜಪಾನಿಗೆ ಕೊಂಡೊಯ್ಯಲು ಬಯಸಿದ್ದಾರಾದರೂ ಭಾರತೀಯ ಕಾನೂನು ಇದಕ್ಕೆ ಸಮ್ಮತಿ ನೀಡುತ್ತಿಲ್ಲ. ದಂಪತಿಗಳ ವಿಚ್ಚೇದನವು ಮಗುವನ್ನು ಪಡೆಯಲು ಅಡ್ಡಿಯಾಗುತ್ತಿದೆ.

ಆ ಮಗುವನ್ನು ಜಪಾನಿಗೆ ಕೊಂಡೊಯ್ಯಲು ನನಗೆ ಇಷ್ಟವಿದೆ. ಆದರೆ, ಸಾಧ್ಯವಾಗುತ್ತಿಲ್ಲ. ಮಗುವಿನ ಬಗ್ಗೆ ಅತ್ಯಂತ ಚಿಂತಿತನಾಗಿದ್ದೇನೆ. ಎಂದು ಯಮಡಾ ಹೇಳುತ್ತಾರೆ.

ಮಗುವಿಗೆ ಜಪಾನಿ ಸರಕಾರದಿಂದ ಪಾಸ್‌ಪೋರ್ಟ್ ಮತ್ತು ಭಾರತದಿಂದ ನಿರಾಕ್ಷೇಪಣಾ ಪತ್ರ(ಎನ್ಒಸಿ) ದೊರಕುವವರೆಗೆ ಮಗುವನ್ನು ಜಪಾನಿಗೆ ಕಳುಹಿಸಲಾಗುವುದಿಲ್ಲ.

ಏನೇ ಆದರೂ, ಭಾರತೀಯ ಸರಕಾರದಿಂದ ನಿರಾಕ್ಷೇಪಣಾ ಪತ್ರ ಸಿಗುವವರೆಗೂ ಮಗುವಿಗೆ ಪಾಸ್‌ಪೋರ್ಟ್ ನೀಡಲಾಗದು ಎಂದು ರಾಯಭಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತನ್ನ ವಕೀಲರನ್ನು ಸಂಪರ್ಕಿಸುವ ಸಲುವಾಗಿ ಯಮಡಾ ಜಪಾನಿಗೆ ತೆರಳಬೇಕಾಗಿದೆ.

ಈ ಹಸುಳೆಯನ್ನು ಯಮಡಾರ 70ರ ಹರೆಯದ ತಾಯಿ ನೋಡಿಕೊಳ್ಳುತ್ತಿದ್ದರೂ, ಇಳಿವಯಸ್ಸಿನ ಅವರಿಗೆ ಮಗುವಿನ ಆರೈಕೆ ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ. ಇವರ ವೀಸಾ ಅವಧಿಯು ಸದ್ಯವೇ ಮುಗಿಯಲಿರುವ ಕಾರಣ ಅವರು ಜಪಾನಿಗೆ ಮರಳಬೇಕಿದೆ. ತನ್ನೊಂದಿಗೆ ಮೊಮ್ಮಗಳನ್ನು ಕರೆದೊಯ್ಯುವ ವಿಶ್ವಾಸ ಅವರದ್ದು.
ಮತ್ತಷ್ಟು
ಒಪ್ಪಂದ ಜಾರಿಗೆ ಅಡೆತಡೆಗಳನ್ನು ದಾಟಬೇಕಿದೆ: ಪಿಎಂ
ಅಮರನಾಥ: ಪ್ರಧಾನಿಯಿಂದ ಸರ್ವಪಕ್ಷ ಸಭೆ
ಹೈಕೋರ್ಟ್‌‌ನಿಂದ 'ಸಿಮಿ' ನಿಷೇಧ ರದ್ದು
ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ