ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಮಿ ನಿಷೇಧ ರದ್ದು ವಿರುದ್ಧ ಮೇಲ್ಮನವಿ: ಗೃಹ ಸಚಿವಾಲಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಮಿ ನಿಷೇಧ ರದ್ದು ವಿರುದ್ಧ ಮೇಲ್ಮನವಿ: ಗೃಹ ಸಚಿವಾಲಯ Search similar articles
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ನ್ಯಾಯಮಂಡಳಿಯು ಸಿಮಿ ಮೇಲಿನ ನಿಷೇಧವನ್ನು ರದ್ದುಪಡಿಸಿರುವ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

ಈ ಕುರಿತಾಗಿ ವಿವರವಾಗಿ ಪರಿಶೀಲನೆ ನಡೆಸಿ, ಸಚಿವಾಲಯವು ಮುಂದಿನ ಹೆಜ್ಜೆ ಇಡಲಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಈ ಆದೇಶದ ಪೂರ್ವಯೋಜಿತ ಅವಲೋಕನವು, ಸಿಮಿ ಸಂಘಟನೆಯ ನಿಷೇಧವು ತಾಂತ್ರಿಕ ತಳಹದಿಯಿಂದ ದೃಢಪಟ್ಟಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಫೆಬ್ರವರಿ ಏಳರಿಂದ ಎರಡು ವರ್ಷಗಳ ಕಾಲ ಅನ್ವಯವಾಗುವಂತೆ ಕೇಂದ್ರ ಸರಕಾರ ತನ್ನ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಸಿಮಿ ಅರ್ಜಿ ಸಲ್ಲಿಸಿತ್ತು.

ಗೃಹ ಸಚಿವಾಲಯ ನೀಡಿದ ದಾಖಲೆಗಳು ಸಿಮಿ ಮೇಲೆ ನಿಷೇಧ ಹೇರುವಷ್ಟು ಪ್ರಬಲವಾಗಿಲ್ಲದ ಕಾರಣ ಈ ಸಂಘಟನೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಲಿಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಸಿಮಿ ಮೇಲಿನ ನಿಷೇಧವನ್ನು ಮಂಗಳವಾರ ರದ್ದುಪಡಿಸಿತ್ತು.

ಏತನ್ಮಧ್ಯೆ, ಸಿಮಿ ಮೇಲಿನ ನಿಷೇಧವನ್ನು ವಿಶೇಷ ನ್ಯಾಯಾಲಯವು ರದ್ದುಪಡಿಸಿರುವ ಬಗ್ಗೆ ಟೀಕಾಪ್ರಹಾರವನ್ನೇ ನಡೆಸಿರುವ ಬಿಜೆಪಿ, ಇದು ಯುಪಿಎ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದೆ.

ಅಲ್ಲದೆ, ಯುಪಿಎ ಸರಕಾರದ ನೈಜ ಮುಖವನ್ನು ಮತ್ತು ಉಗ್ರಗ ಮೇಲಿನ ಸರಕಾರದ ಮೃದು ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಮತ್ತಷ್ಟು
ಅಪ್ಪ-ಅಮ್ಮ ಜಗಳದಲ್ಲಿ ಬಡವಾದ ಕೂಸು
ಒಪ್ಪಂದ ಜಾರಿಗೆ ಅಡೆತಡೆಗಳನ್ನು ದಾಟಬೇಕಿದೆ: ಪಿಎಂ
ಅಮರನಾಥ: ಪ್ರಧಾನಿಯಿಂದ ಸರ್ವಪಕ್ಷ ಸಭೆ
ಹೈಕೋರ್ಟ್‌‌ನಿಂದ 'ಸಿಮಿ' ನಿಷೇಧ ರದ್ದು
ಭಾರತವನ್ನು ದೇವರೂ ರಕ್ಷಿಸಲಾರ: ಸುಪ್ರೀಂಕೋರ್ಟ್
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್