AvinashWD ಹೊಸ ವಿಶ್ವದಾಖಲೆಯೊಂದನ್ನು ಮಾಡುವತ್ತ ಪ್ರಯತ್ನಶೀಲರಾಗಿರುವ ಕೇರಳದ ಮೃದಂಗ ವಿದ್ವಾಂಸರೊಬ್ಬರು, 101 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರ ಮೃದಂಗ ನುಡಿಸುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ.37ರ ಹರೆಯದ ಕುಳಲ್‌ಮಣ್ಣಂ ಜಿ.ರಾಮಕೃಷ್ಣನ್ ಅವರು 101 ಗಂಟೆಗಳಿಗೂ ಹೆಚ್ಚುಕಾಲದಿಂದ ಮೃದಂಗ ನುಡಿಸುತ್ತಿದ್ದು, ಆಗಸ್ಟ್ 1ರಿಂದ ಆರಂಭಿಸಿರುವ ಈ ಮ್ಯಾರಥಾನ್ ಮೃದಂಗ ನುಡಿಸುವಿಕೆಯನ್ನು ಕನಿಷ್ಠ 15 ದಿನಗಳ ಕಾಲ ಮುಂದುವರಿಸುವ ಇರಾದೆ ಹೊಂದಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.2005ರ ಮೇ ತಿಂಗಳಲ್ಲಿ ಗಿನ್ನೆಸ್