ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಪ್ರಧಾನಮಂತ್ರಿ ಸ್ಥಾನ ಆಕಾಂಕ್ಷೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ನಿರ್ಲ್ಯಕ್ಷಿಸಿದ್ದರೂ, ಸಿಪಿಐ ನಾಯಕ ಎ.ಬಿ.ಬರ್ಧನ್ ಇಂತಹ ಯಾವುದೇ ಋಣಾತ್ಮಕ ಮನೋಭಾವವನ್ನು ಹೊಂದದೇ ಇದ್ದು, ಪ್ರಧಾನಮಂತ್ರಿಯಾಗಲು ಮಾಯಾವತಿ ಉತ್ತಮ ಅಭ್ಯರ್ಥಿ ಎಂದು ಹೇಳಿದ್ದಾರೆ.
ಮಾಯಾವತಿ ಅವರನ್ನೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಆತುರ ತೋರದ ಸಿಪಿಐ, ಎಡಪಕ್ಷ, ಯುಎನ್‌ಪಿಎ, ಬಿಎಸ್‌ಪಿ ಮತ್ತು ಜೆಡಿಎಸ್ ಪಕ್ಷಗಳನ್ನೊಳಗೊಂಡ ತೃತೀಯ ರಂಗದ ರಚನೆಯನ್ನು ಕಾಯುತ್ತಿದೆ.
"ಮಾಯಾವತಿ ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಇತರ ಪ್ರಧಾನಮಂತ್ರಿ ಅಭ್ಯರ್ಥಿಗಳಿಗೆ ಹೋಲಿಸಿದರೆ, ಮಾಯಾವತಿ ಉತ್ತಮ ಅಭ್ಯರ್ಥಿ" ಎಂದು ಪ್ರಧಾನಿ ಹುದ್ದೆಗೆ ಮಾಯಾವತಿ ಹೆಸರನ್ನು ಪ್ರಸ್ತಾಪಿಸಿದ ಬರ್ಧನ್ ಅಭಿಪ್ರಾಯಿಸಿದ್ದಾರೆ.
ಒಮ್ಮೆ ತೃತೀಯರಂಗ ರೂಪುಗೊಂಡಲ್ಲಿ, ನಮಗೆ ತನ್ನಿಂತಾನೇ ಪ್ರಭಾವಿ ನಾಯಕರು ಸಿಗುತ್ತಾರೆ. ಸಮಯ ಬಂದಾಗ ವಿವಾದಗಳು ತನ್ನಿಂತಾನೇ ಬಗೆಹರಿಯುತ್ತವೆ ಎಂದು ಅವರು ಹೇಳಿದ್ದಾರೆ.
ಏನೇ ಆದರೂ, ಈ ಕುರಿತಾಗಿ ಪಕ್ಷವು ಯಾವುದೇ ಹೆಚ್ಚಿನ ಚರ್ಚೆಯನ್ನು ನಡೆಸಿಲ್ಲ ಎಂದು ಸಿಪಿಐ ಸ್ಪಷ್ಟಪಡಿಸಿದೆ.
|