ಮಹಾರಾಷ್ಟ್ರ ಕಂದಾಯ ಸಚಿವ ನಾರಾಯಣ ರಾಣೆ, ವಿಲಾಸ್ ರಾವ್ ದೇಶ್‌ಮುಖ್ ನೇತೃತ್ವದ ಸಮ್ಮಿಶ್ರ ಸರಕಾರದಿಂದ ಹೊರಹೋಗುವ ಬೆದರಿಕೆಯನ್ನು ಹಾಕಿದ್ದು, ಸರಕಾರವು ಏಕವ್ಯಕ್ತಿ ಹಿತಾಸಕ್ತಿಯನ್ನು ಮಾತ್ರವೇ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
"ಈ ಸರಕಾರವು ಜನಪರ ಸರಕಾರವಲ್ಲ. ಏಕವ್ಯಕ್ತಿ ಹಿತಾಸಕ್ತಿಯನ್ನು ಹೊಂದಿದೆ" ಎಂದು ಮುಖ್ಯಮಂತ್ರಿ ವಿರುದ್ಧ ರಾಣೆ ಆಪಾದಿಸಿದ್ದಾರೆ.
ಸುಮಾರು 8,000 ಕೋಟಿ ರೂಪಾಯಿಗಳ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಯೋಜನೆಗೆ ವೀಡಿಯೋಕೋನ್ ಸಮೂಹಕ್ಕೆ ಭೂ ವಿತರಣೆಗೆ ದೇಶ್‌ಮುಖ್ ಸರಕಾರದ ಅನುಮೋದನೆಯ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದ್ದು, ಈ ಅನುಮೋದನೆಯನ್ನು ರಾಣೆ ಬಲವಾಗಿ ವಿರೋಧಿಸುತ್ತಿದ್ದಾರೆ.
ಅನುಮೋದನೆಯ ವೇಳೆಗೆ ಸಂಸತ್ ಸಮಿತಿಯಲ್ಲಿ ಭಾಗವಹಿಸಿದ್ದ ರಾಣೆ, ಇತರ ಯೋಜನೆಗಳಿಗೆ ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸರಕಾರವು ನೀಡಿದೆ ಎಂಬುದಾಗಿ ದೇಶ್‌ಮುಖ್ ಅವರೊಂದಿಗೆ ವಾಗ್ಯುದ್ಧ ನಡೆಸಿದ್ದಾರೆ.
ಕೇವಲ ಉದ್ಯಮಿಗಳ ಬಗ್ಗೆ ಆಸಕ್ತಿ ತೋರಿ ಸಾಮಾನ್ಯ ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ಸರಕಾರಕ್ಕೆ ರಾಜೀನಾಮೆ ನೀಡುವ ಕುರಿತಾಗಿ ಸದ್ಯವೇ ಕಾಂಗ್ರೆಸ್ ಹೈಕಮಾಂಡ್‌ನ್ನು ಭೇಟಿ ಮಾಡುತ್ತೇನೆ ಎಂದು ರಾಣೆ ಸ್ಪಷ್ಟಪಡಿಸಿದ್ದಾರೆ.
|