ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೂಗ್ಲಿ: ರಸ್ತೆ ಅಪಘಾತದಲ್ಲಿ 12 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೂಗ್ಲಿ: ರಸ್ತೆ ಅಪಘಾತದಲ್ಲಿ 12 ಸಾವು
ಹೂಗ್ಲಿಯ ಚಂಡಿತಾಲಾದ ದುರ್ಗಾಪುರ್ ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿದ್ದ ಬಸ್ಸಿಗೆ ಬುಧವಾರ ಮುಂಜಾನೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮವಾಗಿ, ಜಾರ್ಖಂಡ್‌ನ 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಯೋಗರ್‌ನಿಂದ ತಾರಕೇಶ್ವರದ ಈಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು, ಕೋಪಾರಿಯಾ ಸಮೀಪದಲ್ಲಿ ಬಸ್ ಹಾಳಾದ ಕಾರಣ ಬಸ್ಸಿನಿಂದ ಕೆಳಗಿಳಿದಿದ್ದರು. ಈ ನತದೃಷ್ಟರು ಟ್ರಕ್ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಬಸ್ ಸಮೀಪದಲ್ಲೇ ಅಡ್ಡಾಡುತ್ತಿದ್ದರು.

ಈ ದುರ್ಘಟನೆಯಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತಪಟ್ಟವರಲ್ಲಿ ಎಂಟು ವರ್ಷದ ಬಾಲಕನೂ ಸೇರಿದ್ದಾನೆ.

ಸ್ಥಳೀಯರ ಮತ್ತು ಪೊಲೀಸರ ಸಹಕಾರದಿಂದ ಗಾಯಾಳುಗಳನ್ನು ಶ್ರೀರಾಂಪುರ್, ಉತ್ತರ್ಪಾರ ಸ್ಟೇಟ್ ಜನರಲ್ ಮತ್ತು ಕಲ್ಕತ್ತಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಿಂದಾಗಿ ಹೈವೇಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶ್ರಾವಣ ಮಾಸದ ವಿಶೇಷ ಪೂಜೆಗಾಗಿ ಈಶ್ವರ ದೇವಸ್ಥಾನಕ್ಕೆ ತೆರಳಿ, ನಂತರ ಕೋಲ್ಕತಾದ ಕೆಲವು ಸ್ಥಳಗಳಿಗೆ ಭೇಟಿನೀಡಲು ಯಾತ್ರಾರ್ಥಿಗಳು ನಿರ್ಧರಿಸಿದ್ದರು ಎಂದು ಗಾಯಾಳು ಒಬ್ಬರು ಹೇಳಿದ್ದಾರೆ.
ಮತ್ತಷ್ಟು
ದೇಶ್‌ಮುಖ್ ಸರಕಾರಕ್ಕೆ ರಾಣೆ ರಾಜೀನಾಮೆ ಬೆದರಿಕೆ
ಪ್ರಧಾನಿಹುದ್ದೆಗೆ ಮಾಯಾವತಿ ಸೂಕ್ತ: ಬರ್ಧನ್
101ಕ್ಕೂ ಹೆಚ್ಚು ಗಂಟೆ ನಿರಂತರ ಮೃದಂಗ ವಾದನ
ಸಿಮಿ ನಿಷೇಧ ರದ್ದು ವಿರುದ್ಧ ಮೇಲ್ಮನವಿ: ಗೃಹ ಸಚಿವಾಲಯ
ಅಪ್ಪ-ಅಮ್ಮ ಜಗಳದಲ್ಲಿ ಬಡವಾದ ಕೂಸು
ಒಪ್ಪಂದ ಜಾರಿಗೆ ಅಡೆತಡೆಗಳನ್ನು ದಾಟಬೇಕಿದೆ: ಪಿಎಂ