ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಹಮದಾಬಾದ್ ಸ್ಫೋಟ: 3ಶಂಕಿತರ ರೇಖಾಚಿತ್ರ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಾಬಾದ್ ಸ್ಫೋಟ: 3ಶಂಕಿತರ ರೇಖಾಚಿತ್ರ ಬಿಡುಗಡೆ
ಅಹಮದಾಬಾದ್‌ನಲ್ಲಿ ಜು.26ರಂದು ಮೂರು ಪ್ರದೇಶಗಳಲ್ಲಿ ಇರಿಸಿದ್ದ ಸರಣಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಬುಧವಾರದಂದು ಮೂರು ಮಂದಿ ಶಂಕಿತರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.

ನಗರದ ನರೋಲ್, ಹಾತೇಕೇಶ್ವರ್ ಮತ್ತು ರಾಯ್‌ಪುರ್ ಪ್ರದೇಶಗಳ್ಲಿ ಸರಣಿ ಬಾಂಬ್ ಇಟ್ಟ ಮೂರು ಮಂದಿ ಶಂಕಿತರ ರೇಖಾಚಿತ್ರವನ್ನು ನಾವು ಬಿಡುಗಡೆಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬ ನೀಡಿದ ಮಾಹಿತಿ ಆಧಾರದ ಮೇಲೆ ಈ ಶಂಕಿತರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿರುವುದಾಗಿ ಸಹಾಯಕ ಪೊಲೀಸ್ ಕಮೀಷನರ್ ಎಚ್.ಪಿ.ಸಿಂಗ್ ಹೇಳಿದರು.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 50ಮಂದಿ ಬಲಿಯಾಗಿದ್ದರು. ಪ್ರಕರಣದ ಕುರಿತು ತೀವ್ರ ತನಿಖೆ ನಡೆಸುತ್ತಿರುವ ಕ್ರೈಮ್ ಬ್ರ್ಯಾಂಚ್ ಪೊಲೀಸರು, ತನಿಖೆಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಶಂಕಿತರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದೆ.
ಮತ್ತಷ್ಟು
ಜಮ್ಮು: ಗೋಲಿಬಾರ್‌ಗೆ ಮತ್ತೋರ್ವ ಬಲಿ
ಸಿಮಿ ನಿಷೇಧ ರದ್ದತಿಗೆ ಸು.ಕೋ ತಡೆಯಾಜ್ಞೆ
ಅಮರನಾಥ ಮಂಡಳಿ ಎಲ್ಲಾ 10 ಸದಸ್ಯರ ರಾಜೀನಾಮೆ
ಹೂಗ್ಲಿ: ರಸ್ತೆ ಅಪಘಾತದಲ್ಲಿ 12 ಸಾವು
ದೇಶ್‌ಮುಖ್ ಸರಕಾರಕ್ಕೆ ರಾಣೆ ರಾಜೀನಾಮೆ ಬೆದರಿಕೆ
ಪ್ರಧಾನಿಹುದ್ದೆಗೆ ಮಾಯಾವತಿ ಸೂಕ್ತ: ಬರ್ಧನ್