ಸ್ವದೇಶಿ ನಿರ್ಮಿತ ಟ್ಯಾಂಕ್ ನಿರೋಧಕ ಕ್ಷಿಪಣಿ 'ನಾಗ್'ನ ಯಶಸ್ವಿ ಅಂತಿಮ ಪರೀಕ್ಷೆಯನ್ನು ಬುಧವಾರ ಭಾರತವು ನಡೆಸಿದ್ದು, ಈ ಮೂಲಕ ಕ್ಷಿಪಣಿ ಅಭಿವೃದ್ಧಿ ತಂತ್ರಜ್ಞಾನದಲ್ಲಿ ಭಾರತವು ಇನ್ನೊಂದು ಮೈಲಿಗಲ್ಲನ್ನು ತಲುಪಿದೆ.
ನಾಗ್‌ನ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದು ಸೇನೆಯಲ್ಲಿ ಸೇರ್ಪಡೆಗೆ ಸಿದ್ಧವಾಗಿದೆ ಎಂದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯು ಘೋಷಿಸಿದೆ.
ರಾಜಸ್ಥಾನದ ಪೋಕ್ರಾನ್ ಪ್ರದೇಶದಲ್ಲಿ ಕಳೆದ 48 ಗಂಟೆಗಳ ಅವಧಿಯಲ್ಲಿ ಸೇನಾ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಈ ಪರೀಕ್ಷೆಯನ್ನು ನಡೆಸಲಾಯಿತು.
ಸ್ಥಿರ ಹಾಗೂ ಚಲನೆಯ ಗುರಿಯತ್ತ ಈ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಾಗಿದ್ದು, ನಾಲ್ಕು ಕಿ.ಮೀ ಸುತ್ತಳತೆಯಲ್ಲಿ ಸಮರ ಟ್ಯಾಂಕ್‌ಗಳನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಿಆರ್‌ಡಿಒ ಮುಖ್ಯ ನಿಯಂತ್ರಕ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.
ಪ್ರಸಕ್ತ ಸೇನೆಗೆ ಈ ಕ್ಷಿಪಣಿಯ ಅಗತ್ಯವಿದ್ದು, ಇತ್ತೀಚೆಗೆ ರಶ್ಯಾ ಮತ್ತು ಫ್ರಾನ್ಸ್‌ನಿಂದ 4,000 ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ಖರೀದಿಸಿತ್ತು.
|