ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು: ಮತ್ತೆ ಭುಗಿಲೆದ್ದ ಹಿಂಸಾಚಾರ, ಕಲ್ಲುತೂರಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು: ಮತ್ತೆ ಭುಗಿಲೆದ್ದ ಹಿಂಸಾಚಾರ, ಕಲ್ಲುತೂರಾಟ
ಜಮ್ಮು: ಕಳೆದೆರಡು ದಿನಗಳಿಂದ ಉಪಾವಾಸ ಸತ್ಯಾಗ್ರಹ ಹೂಡಿರುವ ಜೆಕೆಎಲ್‌ಎಫ್ ನಾಯಕ ಯಾಸಿನ್ ಮಲಿಕ್ ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಶ್ರೀನಗರದ ದಕ್ಷಿಣ ಭಾಗದಲ್ಲಿ ಹಿಂಸಾಚಾರ ಮರುಕಳಿಸಿದೆ.

ಇದರಿಂದಾಗಿ ಶ್ರೀನಗರವು ಗುರುವಾರ ಮತ್ತೆ ಮುಚ್ಚಲ್ಪಟ್ಟಿದೆ. ಪ್ರತಿಭಟನಾಕಾರರು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೊದಲೇ ಆರೋಗ್ಯ ಸರಿಇಲ್ಲದ ಮಲಿಕ್ ಕಳೆದೆರಡು ದಿನಗಳಿಂದ ಔಷಧಿಯನ್ನೂ ಸೇವಿಸುತ್ತಿಲ್ಲ. ಇದರಿಂದಾಗಿ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಸಮಿತಿ ನೇಮಕ
ಅಮರನಾಥ್ ಭೂವಿವಾದದ ಕುರಿತಾಗಿ ಜಮ್ಮುವಿನಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸುವ ಮತ್ತೊಂದು ಪ್ರಯತ್ನವೆಂಬಂತೆ, ಜಮ್ಮುವಿನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಅಮರನಾಥ್ ಸಂಘರ್ಷ ಸಮಿತಿಯೊಂದಿಗೆ ಮಾತುಕತೆ ನಡೆಸಲು ಜಮ್ಮು ರಾಜ್ಯಪಾಲ ಎನ್.ಎನ್ ವೋರಾ, ನಾಲ್ಕು ಮಂದಿ ಸದಸ್ಯರ ತಂಡವೊಂದನ್ನು ನೇಮಿಸಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಸರ್ವಪಕ್ಷ ಸಭೆಯು ಅಂತ್ಯಗೊಂಡ ಬಳಿಕ, ಮಾತುಕತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ರಾಜಕೀಯ ಪಕ್ಷಗಳು ಪ್ರತಿಭಟನಾಕಾರರಿಗೆ ಜಂಟಿ ಮನವಿ ಮಾಡಿರುವ ಬೆನ್ನಲ್ಲೇ ಈ ಪ್ರಕಟಣೆಯು ಹೊರಬಿದ್ದಿದೆ.

ಜಮ್ಮು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಬ್ಲೋರಿಯಾ, ಜಮ್ಮು ವಿಶ್ವವಿದ್ಯಾಲಯದ ಉಪ ಕುಲಪತಿ ಅಮಿತಾಭ್ ಮಾಟೂ, ಜಮ್ಮು ಕಾಶ್ಮೀರ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಜಿ.ಡಿ.ಶರ್ಮ ಮತ್ತು ಅಮರನಾಥ ಮಂದಿರ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ವ್ಯಾಸ ಅವರನ್ನೊಳಗೊಂಡ ಈ ಸಮಿತಿಯು, ಜಮ್ಮುವಿನ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿದ ಪ್ರತಿಭಟನೆಯನ್ನು ನಿಲುಗಡೆಗೊಳಿಸುವಂತೆ ಪ್ರತಿಭಟನಾ ಸಮೂಹಕ್ಕೆ ಮನವಿ ಮಾಡಲಿದೆ.

ನೂತನ ಸಮಿತಿಯು ಯಾವ ರೀತಿ ಸಮಸ್ಯೆಗೆ ಸ್ಪಂದಿಸುತ್ತದೆ ಎಂಬುದನ್ನು ಅಮರನಾಥ ಸಂಘರ್ಷ ಸಮಿತಿ ಖಚಿತಪಡಿಸಿಕೊಳ್ಳಲಿದೆ ಎಂದು ಅಮರನಾಥ ಸಂಘರ್ಷ ಸಮಿತಿಯ ಸಂಚಾಲಕ ಲೀಲಾ ಕರಣ್ ಶರ್ಮ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಅಲ್ಲದೆ, ವಿವಾದಿತ ಭೂಮಿಯನ್ನು ಅಮರನಾಥ ಮಂದಿರ ಮಂಡಳಿಗೆ ಹಸ್ತಾಂತರಿಸಲು ಇರುವ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೇ?
'ನಾಗ್' ಕ್ಷಿಪಣಿಯ ಯಶಸ್ವಿ ಪರೀಕ್ಷೆ
ಜಮ್ಮುವಿಗೆ ಸರ್ವಪಕ್ಷ ನಿಯೋಗ
ಅಹಮದಾಬಾದ್ ಸ್ಫೋಟ: 3ಶಂಕಿತರ ರೇಖಾಚಿತ್ರ ಬಿಡುಗಡೆ
ಜಮ್ಮು: ಗೋಲಿಬಾರ್‌ಗೆ ಮತ್ತೋರ್ವ ಬಲಿ
ಸಿಮಿ ನಿಷೇಧ ರದ್ದತಿಗೆ ಸು.ಕೋ ತಡೆಯಾಜ್ಞೆ