ತನ್ನ ಎದುರಾಳಿಗಳ ಟೀಕೆಗೆ ಧೈರ್ಯಗುಂದದ ಬಹುಜನ ಸಮಾಜವಾದಿ ಪಕ್ಷ ಮುಖ್ಯಸ್ಥೆ ಮಾಯಾವತಿ, ಈಗಾಗಲೇ ಎರಡು ಕಂಚಿನ ಪ್ರತಿಮೆಗಳನ್ನು ಹೊಂದಿರುವ ರಾಜ್ಯದ ರಾಜಧಾನಿಯಲ್ಲಿಯೇ ಮತ್ತು ಮೂರು ಪ್ರತಿಮೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ.
ಬೌಧ್ಥ ಸ್ತೂಪದ ಮಾದರಿಯಲ್ಲಿಯೇ ನಿರ್ಮಿತಗೊಂಡಿರುವ ಕಲ್ಲಿನ ಪ್ರತಿಮೆ ಇರುವ ಬಿಎಸ್‌ಪಿಯ ಪ್ರೇರಣಾ ಸ್ಥಳದಲ್ಲಿ 18 ಅಡಿ ಎತ್ತರದ ಮಾಯಾವತಿ ಪ್ರತಿಮೆಯನ್ನು ಸ್ಥಾಪಿಸಲು ಆಯೋಜಿಸಲಾಗಿದೆ.
ರಾಜ್ಯ ರಾಜ್ಯಪಾಲರ ನಿವಾಸದ ಹಿಂಭಾಗದಲ್ಲಿರುವ 50,000 ಚದರ ಅಡಿ ಜಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಬಿಎಸ್‌ಪಿಯ ಸ್ವಂತ ಕಚೇರಿಯನ್ನು ಧ್ವಂಸಗೊಳಿಸಿ ಈ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ಪ್ರಸಕ್ತ, ಸರಕಾರಿ ಬಂಗಲೆಗೆ ಸ್ಥಳಾಂತರಿತಗೊಂಡ ಪಕ್ಷದ ಮುಖ್ಯ ಕಾರ್ಯಾಲಯದ ಸ್ಥಳದಲ್ಲಿ ಸ್ಥಾಪಿತಗೊಳ್ಳಲಿರುವ ಈ ಪ್ರತಿಮೆಯ ಜಾಗವನ್ನು ಬಹುಜನ ನಾಯಕ್ ಪಾರ್ಕ್ ಎಂಬುದಾಗಿ ಕರೆಯಲಾಗುವುದು.
ಲಖ್ನೋ ಜಿಲ್ಲಾ ಕಾರಾಗೃಹದಿಂದ ನೀಡಲಾದ 32 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಕಾನ್ಶಿ ರಾಮ್ ಸ್ಮಾರಕದಲ್ಲಿ ಇದೇ ರೀತಿಯ ಪ್ರತಿಮೆಯನ್ನು ಸ್ಥಾಪಿಸಲು ಆಯೋಜಿಸಲಾಗಿತ್ತು.
ಮೂರನೇ ಪ್ರತಿಮೆಯನ್ನು, ಐದು ದಶಕೋಟಿ ವೆಚ್ಚದಲ್ಲಿ ನಿರ್ಮಿತವಾಗುತ್ತಿರುವ ಮಾಯಾವತಿಯ ಕನಸಿನ ಯೋಜನೆ ಅಂಬೇಡ್ಕರ್ ಪಾರ್ಕ್ ಮತ್ತು ಸ್ಮಾರಕದ ಮುಖ್ಯ ಭಾಗದಲ್ಲಿ ಸ್ಥಾಪಿಸಲಾಗುವುದು.
ಮೂರು ಕಂಚಿನ ಪ್ರತಿಮೆಗಳನ್ನು ನಿರ್ಮಾಣ ಮಾಡುತ್ತಿರುವ ಶಿಲ್ಪಿ ರಾಮ್ ಸೂತರ್, ತನಗೆ ಶೀಘ್ರದಲ್ಲೇ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
|