ನಂದಿಗ್ರಾಮದಲ್ಲಿ, ತೃಣಮೂಲ ಕಾಂಗ್ರೆಸ್ ಬೆಂಬಲಿತ ಭೂಮಿ ಉಚ್ಚಡ್ ಪ್ರತಿರೋಧ್ ಸಮಿತಿ(ಬಿಯುಪಿಸಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರ ನಡುವಿನ ಗುಂಡಿನ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಬುಧವಾರ ರಾಜರಾಂಚಾಕ್ ಗ್ರಾಮದಲ್ಲಿ ಗುಂಡುದಾಳಿ ನಡೆದು ಒಬ್ಬ ಸಾವನ್ನಪ್ಪಿದ ಬಳಿಕ ಉಭಯ ಬಣಗಳ ನಡುವಿನ ಘರ್ಷಣೆಯು ಹೆಚ್ಚಳಗೊಂಡಿದೆ.
ಸಿಪಿಎಂ ರಾಜರಾಂಚಕ್ ಸ್ಥಳೀಯ ಸಿಮಿತಿ ಕಾರ್ಯದರ್ಶಿಯಾಗಿರುವ ನಿರಂಜನ್ ಮೋಂಡಾಲ್, ಕೋಲ್ಕತ್ತಾದಿಂದ ತನ್ನ ಮನೆಗೆ ಹಿಂತಿರುಗುವ ವೇಳೆ ಗುಂಡುದಾಳಿಗೆ ಸಿಲುಕಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಾವು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿರುವ ಸಿಪಿಎಂ, ಕೆಜುರಿ I, II, ನಂದಿಗ್ರಾಮ I, II ಮತ್ತು ಚಂದೀಪುರ್ ಬ್ಲಾಕ್ I, IIನಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ.
ಕೊಲೆಗಾರರ ಬಂಧನಕ್ಕೆ ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ ಕೂಡಾ ಇದೇ ಪ್ರದೇಶದಲ್ಲಿ ಬಂದ್‌ಗೆ ಕರೆ ನೀಡಿದೆ ಎಂದು ಪೂರ್ವ ಮಿಡ್ನಾಪುರ್ ಜಿಲ್ಲೆಯ ಪಕ್ಷಾಧ್ಯಕ್ಷ ಸಿಸಿರ್ ಅಧಿಕಾರಿ ಹೇಳಿದ್ದಾರೆ.
|