ಅಮರನಾಥ ಭೂವಿವಾದದ ಕುರಿತಾದ ಪ್ರತಿಭಟನೆಯನ್ನು ನಿಲ್ಲಿಸುವಂತೆ ಸರಕಾರದ ಮನವಿಯ ಹೊರತಾಗಿಯೂ, ಅಮರನಾಥ ದೇವಾಲಯಕ್ಕೆ ಭೂಮಿಯನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಬಿಜೆಪಿಯ ಪ್ರಧಾನ ಸಮಿತಿಯು ಮೂರು ದಿನಗಳ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ.
ಅಮರನಾಥ ದೇವಾಲಯಕ್ಕೆ ಭೂಮಿಯನ್ನು ಹಿಂತಿರುಗಿಸುವ ಹೊರತಾಗಿ ಬೇರೆ ಯಾವುದೇ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲ ವಿ.ವಿ.ಮಲ್ಹೋತ್ರಾ ಅವರನ್ನು ವಾಪಾಸ್ ಕಳುಹಿಸಿರುವುದು ಮತ್ತು ಜಮೀನನ್ನು ಅಮರನಾಥ ದೇವಾಲಯಕ್ಕೆ ಹಿಂತಿರುಗಿಸುವ ಕುರಿತಾದ ಬಿಜೆಪಿಯ ಬೇಡಿಕೆಯನ್ನು ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರೋಧಿಸುತ್ತಿರುವುದರಿಂದ, ಅಮರನಾಥ ಭೂವಿವಾದದ ಕುರಿತಂತೆ ಶಾಂತಿ ಸ್ಥಾಪಿಸುವ ಕೇಂದ್ರದ ಪ್ರಯತ್ನವು ವಿಫಲವಾಗುತ್ತಿದೆ.
ಏತನ್ಮಧ್ಯೆ, ಜಮ್ಮುವಿನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಶ್ರೀ ಅಮರನಾಥ ಸಂಘರ್ಷ ಸಮಿತಿಯೊಂದಿಗೆ ಮಾತುಕತೆ ನಡೆಸಲು ರಾಜ್ಯಪಾಲ ಎನ್.ಎನ್.ವೋರಾ ನಾಲ್ಕು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ನೇಮಿಸಿದ್ದಾರೆ.
|