ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು: ಪ್ರಧಾನಿಗೆ ನೋವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು: ಪ್ರಧಾನಿಗೆ ನೋವು
ಲೋಕಸಭೆಯಲ್ಲಿನ ವಿಶ್ವಾಸ ಗೊತ್ತುವಳಿಯ ಕುರಿತ ಚರ್ಚೆಯ ವೇಳೆ ಯುಪಿಎ ಪರ ಮತ ಹಾಕುವಂತೆ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿ ಹಣದ ಕಟ್ಟುಗಳನ್ನು ಲೋಕಸಭೆಯಲ್ಲಿ ಝಳಪಿಸಿದ ಬಿಜೆಪಿಯ ಮೂರು ಸಂಸದರ ನಡವಳಿಕೆಯಿಂದ ಬಗ್ಗೆ ಪ್ರಧಾನಮಂತ್ರಿ ಅತ್ಯಂತ ವೇದನೆಗೊಳಗಾಗಿದ್ದರು ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ.

ವೋಟಿಗಾಗಿ ನೋಟು ವಿವಾದದಿಂದ ಪ್ರಧಾನಮಂತ್ರಿ ಅತ್ಯಂತ ಜರ್ಝರಿತರಾಗಿದ್ದರು ಎಂದು ಪ್ರಧಾನಮಂತ್ರಿಗೆ ಸಮೀಪದ ಮೂಲಗಳು ತಿಳಿಸಿವೆ.

ವಿಶ್ವಾಸಮತದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಪ್ರಧಾನಮಂತ್ರಿ ಹೊಂದಿದ್ದು, ಅವರ ಮುಖಭಾವವು ಅವರ ವಿಶ್ವಾಸವನ್ನು ಪ್ರತಿಬಿಂಬಿಸುತ್ತಿತ್ತು ಎಂದು ಮೂಲಗಳು ಹೇಳಿವೆ.

ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಎಡಪಕ್ಷಗಳು ವಿರೋಧ ವ್ಯಕ್ತಪಡಿಸುವುದರೊಂದಿಗೆ ಯುಪಿಎ ಸರಕಾರದಿಂದ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿಗೆ ವಿಶ್ವಾಸಮತ ಯಾಚನೆಯು ಅನಿವಾರ್ಯವಾಗಿತ್ತು.

ವಿಶ್ವಾಸಮತದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ಭರವಸೆಯನ್ನು ಪ್ರಧಾನಿ ಹೊಂದಿದ್ದು, ಇದು, ಎಡಪಕ್ಷಗಳ ಬೆಂಬಲ ಹಿಂತೆಗೆತದ ಹೊರತಾಗಿಯೂ ಒಪ್ಪಂದದ ಕುರಿತಾಗಿ ಐಎಇಎಯೊಂದಿಗೆ ಮಾತುಕತೆಯನ್ನು ಮುಂದುವರಿಸಿದ್ದಕ್ಕೆ ಸಾಕ್ಷಿಯಾಗಿತ್ತು.

ಪ್ರಸಕ್ತ, ಭಾರತ ಅಮೆರಿಕ ಪರಮಾಣು ಒಪ್ಪಂದವು ಕಾರ್ಯಗತಗೊಳ್ಳಲು ಸಿದ್ಧಗೊಂಡಿದ್ದರೂ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ಅತ್ಯಂತ ಆತಂಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಾಜವಾದಿ ಪಕ್ಷವು ಸರಕಾರದೊಂದಿಗೆ ಸೇರ್ಪಡೆಗೊಳ್ಳಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಇದು ರಾಜಕೀಯ ಪ್ರಕ್ರಿಯೆಯಾಗಿದ್ದು, ಈ ಕುರಿತಾಗಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ ಎಂದು ಉತ್ತರಿಸಿದರು.

ಗ್ರಾಮೀಣಾಭಿವೃದ್ಧಿ ಹೆಚ್ಚಳ
ಯುಪಿಎ ಸರಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಯ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿದೆ ಎಂದು ಇದೇ ವೇಳೆ ತಿಳಿಸಿದ ಪ್ರಧಾನಿ ಸಿಂಗ್, ಯುಪಿಎ ಸರಕಾರವು ಭಾರತದ ಗ್ರಾಮೀಣ ಪ್ರದೇಶಗಳ ಬೆಳವಣಿಗೆಯತ್ತ ಗಮನಹರಿಸಿದ್ದು, ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದ ಅವಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಉಂಟಾಗಿದೆ ಎಂದು ನುಡಿದಿದ್ದಾರೆ.

ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಯುಪಿಎ ಸರಕಾರವು ಜಾರಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಅಮರನಾಥ್ ವಿವಾದ: ಬಿಜೆಪಿಯಿಂದ ಪ್ರತಿಭಟನೆ
ವಕೀಲರೊಂದಿಗೆ ಕಲಹ: ವಿಚಾರಣೆ ನಡೆಸೆ ಎಂದ ಜಡ್ಜ್
ನಂದಿಗ್ರಾಮದಲ್ಲಿ ಮರುಕಳಿಸಿದ ಗಲಭೆ: 1 ಸಾವು
ಲಕ್ನೋದಲ್ಲಿ ಮತ್ತೆ 3 ಮಾಯಾವತಿ ಪ್ರತಿಮೆ
ಜಮ್ಮು: ಮತ್ತೆ ಭುಗಿಲೆದ್ದ ಹಿಂಸಾಚಾರ, ಕಲ್ಲುತೂರಾಟ
ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೇ?