ಪಾಕಿಸ್ತಾನ ಗುಪ್ತಚರ ಇಲಾಖೆಯೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ ಆರು ವರ್ಷಗಳ ಹಿಂದೆ ಬಂಧಿಸಲಾಗಿದ್ದ ಐದು ಮಂದಿಯ ಮೇಲಿನ ತನಿಖೆಯನ್ನು ರಾಂಪುರ ಪೊಲೀಸರು ಪ್ರಾರಂಭಿಸಿದ್ದಾರೆ.
ಅಹಮದಾಬಾದ್, ಬೆಂಗಳೂರು ಸರಣಿ ಬಾಂಬ್ ಸ್ಫೋಟ ಮತ್ತು ರಾಂಪುರದಲ್ಲಿನ ಸೂಕ್ಷ್ಮ ಗುರಿಯ ಮುಂದಾಗಿ, ಈ ತನಿಖೆಯು ವಿಶೇಷ ಬೆಳವಣಿಗೆಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧೀಕ್ಷಕ ವೀರ್ ಬಹಾದ್ದೂರ್ ಸಿಂಗ್ ತಿಳಿಸಿದ್ದಾರೆ.
ರಾಂಪುರದಲ್ಲಿ ಸಿಆರ್‌ಪಿಎಫ್ ಕ್ಯಾಂಪಿನಲ್ಲಿದ್ದ ಏಳು ಸಿಆರ್‌ಪಿಎಫ್ ಪಡೆಗಳ ಮೇಲೆ ಮತ್ತು ನಾಗರಿಕರ ಮೇಲೆ ಜನವರಿ ಒಂದರಂದು ಉಗ್ರಗಾಮಿಗಳು ಗುಂಡುದಾಳಿ ನಡೆಸಿದ್ದರು.
ಪಾಕಿಸ್ತಾನದ ಐಎಸ್ಐನೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ ಆಗಸ್ಟ್ 2002ರಲ್ಲಿ ಜಾವೇದ್ ಮಯನ್ ಅಲಿಯಾಸ್ ಗುದ್ದು, ತಾಜ್ ಮಹಮ್ಮದ್, ಮಕ್ಸೂದ್ ಮತ್ತು ಮಮ್ತಾಜ್ ಮಯನ್ ಅವರನ್ನು ಬಂಧಿಸಲಾಗಿತ್ತು .
ಇನ್ನೊಬ್ಬ ಶಂಕಿತ ಐಎಸ್ಐ ಏಜೆಂಟ್, ಶಕೀಲ್ ಅಹ್ಮದ್ ಅಲಿಯಾಸ್ ಕಾರಿಯನ್ನು ಫೆಬ್ರವರಿ 1, 2003ರಂದು ಐಎಸ್ಐಗೆ ಮಾಹಿತಿ ರವಾನಿಸುವ ಆರೋಪದಲ್ಲಿ ಬಂಧಿಸಲಾಗಿತ್ತು.
ಸಿಮಿ ಮತ್ತು ಐಎಸ್ಐನಲ್ಲಿ ಸಂಬಂಧ ಹೊಂದಿರುವ ಅನೇಕ ಶಂಕಿತರು, ಪೂರ್ವ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ಮೂಲಕ ರಾಂಪುರಕ್ಕೆ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
|