ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ್ ವಿವಾದ: ಪೂಂಚ್‌ನಲ್ಲಿ ಕರ್ಫ್ಯೂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ್ ವಿವಾದ: ಪೂಂಚ್‌ನಲ್ಲಿ ಕರ್ಫ್ಯೂ
ಅಮರನಾಥ ದೇವಾಲಯಕ್ಕೆ ಜಮೀನು ಹಸ್ತಾಂತರ ವಿವಾದದ ಹಿನ್ನಲೆಯಲ್ಲಿ ಉದ್ಬವಿಸಿಸಿರುವ ಘರ್ಷಣೆಯ ಮುಂಜಾಗ್ರತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿಗದೆ.

ಗುರುವಾರದ ಕಲ್ಲುತೂರಾಟ ಮುಂತಾದ ಹಿಂಸಾಚಾರ ವರದಿಗಳ ಹಿನ್ನೆಲೆಯಲ್ಲಿ ಪೂಂಚ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ನಗರದ ಕೆಲವು ಪ್ರದೇಶಗಳಲ್ಲಿ ಸೇನೆಯು ಪಥಸಂಚಲನ ನಡೆಸಿತು ಎಂದೂ ಅವರು ಹೇಳಿದ್ದಾರೆ.

ಜಮ್ಮುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಪೂಂಚ್‌ನಲ್ಲಿ ಗುರುವಾರ ಶಾಲೆ, ಇತರ ಶಿಕ್ಷಣ ಸಂಸ್ಥೆ ,ಸರಕಾರಿ ಕಚೇರಿ ಮತ್ತು ಬ್ಯಾಂಕುಗಳನ್ನು ಬಲವಂತವಾಗಿ ಮುಚ್ಚಿಸಿದ್ದರು. ಅಲ್ಲದೆ, ಅಂಚೆ ಕಚೇರಿ, ದೂರವಾಣಿ ಕೇಂದ್ರ ಮುಂತಾದವುಗಳ ಮೇಲೆ ಕಲ್ಲು ತೂರಾಟವನ್ನು ಕೂಡಾ ನಡೆಸಿದ್ದರು.

ಜೂನ್ ತಿಂಗಳಲ್ಲಿ ಪ್ರಾರಂಭಗೊಂಡ ಅಮರನಾಥ ಭೂ ವಿವಾದದ ನಂತರ ಮೊದಲ ಬಾರಿಗೆ ಪೂಂಚ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಮತ್ತಷ್ಟು
ಉಗ್ರರಿಗೆ ಐಎಸ್ಐ ಸಂಪರ್ಕ: ತನಿಖೆ ಪ್ರಾರಂಭ
ಶನಿವಾರ ಜಮ್ಮುವಿಗೆ ಸರ್ವಪಕ್ಷ ನಿಯೋಗ
ವೋಟಿಗಾಗಿ ನೋಟು: ಪ್ರಧಾನಿಗೆ ನೋವು
ಅಮರನಾಥ್ ವಿವಾದ: ಬಿಜೆಪಿಯಿಂದ ಪ್ರತಿಭಟನೆ
ವಕೀಲರೊಂದಿಗೆ ಕಲಹ: ವಿಚಾರಣೆ ನಡೆಸೆ ಎಂದ ಜಡ್ಜ್
ನಂದಿಗ್ರಾಮದಲ್ಲಿ ಮರುಕಳಿಸಿದ ಗಲಭೆ: 1 ಸಾವು