ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮೆರಿಕ ಕಂಪನಿಗೆ ದುರ್ಗಾಪೂಜೆ ಹಕ್ಕು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಕಂಪನಿಗೆ ದುರ್ಗಾಪೂಜೆ ಹಕ್ಕು
ದುರ್ಗಾಪೂಜೆ ಹಬ್ಬವನ್ನು ವಾಣಿಜ್ಯೀಕರಣಗೊಳಿಸುವ ನಿಟ್ಟಿನಲ್ಲಿ, ಕೋಲ್ಕತ್ತಾದ ಪ್ರಮುಖ ದುರ್ಗಾಪೂಜಾ ಸಮಿತಿಯು ದುರ್ಗಾಪೂಜೆ ಆಚರಣೆಯ ಹಕ್ಕನ್ನು ಅಮೆರಿಕದ ಕಂಪನಿಯೊಂದಕ್ಕೆ ಮಾರಾಟ ಮಾಡಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಇದರ ರಾಯಭಾರಿಯಾಗಲಿದ್ದಾರೆ.

ದಕ್ಷಿಣ ಕೋಲ್ಕತಾದ ಬದಮ್ತಾಲಾ ಆಶರ್ ಸಂಘ ಪೂಜಾದ ಸಂಪೂರ್ಣ ವೆಚ್ಚವನ್ನು ಅಮೆರಿಕದ ಮೀಡಿಯಾ ಮೋರ್ಫೋಸಿಸ್ ಭರಿಸಲಿದ್ದು, ಇದು ಮಾಧ್ಯಮ ಮತ್ತು ವೆಬ್‌ಗಳಲ್ಲಿ ಪೂಜೆಯನ್ನು ಪ್ರಚಾರ ಮಾಡಲಿದೆ.

ಈ ಮೂಲಕ, ವಿವಿಧ ಪ್ರಾಯೋಜಕರನ್ನು ಕಂಡುಕೊಳ್ಳುತ್ತಿದ್ದ ಪದ್ಧತಿಗೆ ತೆರೆಬಿದ್ದಂತಾಗಿದೆ.

ಇನ್ನೊಂದು ವಿಶೇಷವೆಂಬಂತೆ, ಸಂಘಟನೆಯು ಸೂಪರ್‌ಸ್ಟಾರ್ ಮಿಥುನ್ ಚಕ್ರವರ್ತಿ ಅವರನ್ನು ಇದರ ರಾಯಭಾರಿಯಾಗಿ ನೇಮಿಸಿದ್ದಾರೆ.

ದೇಶದಲ್ಲೆಲ್ಲರ ಮನಸೆಳೆದಿರುವ ಮಿಥುನ್ ಚಕ್ರವರ್ತಿ ಅವರನ್ನು ಸಂಪರ್ಕಿಸಿ ಸಮಿತಿಯ ಯೋಜನೆಯನ್ನು ತಿಳಿಸಿದಾಗ ಧನಾತ್ಮಕವಾಗಿಯೇ ಪ್ರತಿಕ್ರಯಿಸಿದರು ಎಂದು ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಸುಭಾಜಿತ್ ಸರ್ಕಾರ್ ಹೇಳಿದ್ದಾರೆ.
ಮತ್ತಷ್ಟು
ಅಮರನಾಥ್ ವಿವಾದ: ಪೂಂಚ್‌ನಲ್ಲಿ ಕರ್ಫ್ಯೂ
ಉಗ್ರರಿಗೆ ಐಎಸ್ಐ ಸಂಪರ್ಕ: ತನಿಖೆ ಪ್ರಾರಂಭ
ಶನಿವಾರ ಜಮ್ಮುವಿಗೆ ಸರ್ವಪಕ್ಷ ನಿಯೋಗ
ವೋಟಿಗಾಗಿ ನೋಟು: ಪ್ರಧಾನಿಗೆ ನೋವು
ಅಮರನಾಥ್ ವಿವಾದ: ಬಿಜೆಪಿಯಿಂದ ಪ್ರತಿಭಟನೆ
ವಕೀಲರೊಂದಿಗೆ ಕಲಹ: ವಿಚಾರಣೆ ನಡೆಸೆ ಎಂದ ಜಡ್ಜ್