ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮತ್ತೊಮ್ಮೆ ಸಿಪಿಎಂಗೆ ಸೇರಲಾರೆ ಚಟರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೊಮ್ಮೆ ಸಿಪಿಎಂಗೆ ಸೇರಲಾರೆ ಚಟರ್ಜಿ
ತನ್ನ ಅಧಿಕಾರಾವಧಿ ಮುಗಿದ ನಂತರ ನಿವೃತ್ತಿ ಹೊಂದುವುದಾಗಿ ತಿಳಿಸಿರುವ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ, ಮತ್ತೊಮ್ಮೆ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರನ್ನು ಇತ್ತೀಚೆಗೆ ಸಿಪಿಎಂ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

"ಪಕ್ಷದ ಸದಸ್ಯನಾಗಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಪಕ್ಷದಿಂದ ಪದಚ್ಯುತಗೊಂಡ ದಿನ ನನ್ನ ಜೀವನದ ಅತಿ ಕೆಟ್ಟ ದಿನವಾಗಿದೆ. ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳ್ಳುವುದಿಲ್ಲ" ಎಂದು 54ನೇ ಕಾಮನ್‌ವೆಲ್ತ್ ಸಂಸತ್ ಸಂಘಟನೆಯ ಸಭೆಯಲ್ಲಿ ಭಾರತೀಯ ಸಂಸತ್ ನಿಯೋಗದ ನೇತೃತ್ವ ವಹಿಸಿರುವ ಚಟರ್ಜಿ ತಿಳಿಸಿದ್ದಾರೆ.

ಪಕ್ಷವು ಮತ್ತೆ ಆಮಂತ್ರಿಸಿದರೆ ಸಿಪಿಎಂಗೆ ಮತ್ತೆ ಸೇರ್ಪಡೆಗೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚಟರ್ಜಿ, ನಿವೃತ್ತಿ ಜೀವನವನ್ನು ಬಯಸುವುದಾಗಿ ಸೂಚಿಸಿದರು.

"ನಾನು ನನ್ನ ರಾಜ್ಯದಿಂದ ದೂರಕ್ಕೆ ಹೋಗುತ್ತೇನೆ. ಜನಸಂಖ್ಯೆ ಕಡಿಮೆ ಇರುವ ಪ್ರದೇಶದಲ್ಲಿ ನಿವೃತ್ತಿ ಜೀವನವನ್ನು ಕಳೆಯಲು ಬಯಸುತ್ತೇನೆ" ಎಂದು 79 ವರ್ಷದ ಚಟರ್ಜಿ ತಿಳಿಸಿದರು.

ಈ ನಡುವೆ, ಲೋಕಸಭೆ ಸ್ಪೀಕರ್ ಆಗಿ ಆಯ್ಕೆಗೊಂಡ ಸಂದರ್ಭದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಯಾಕೆ ಚಿಂತಿಸಲಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸಂಪ್ರದಾಯವಲ್ಲ ಎಂದು ಉತ್ತರಿಸಿದರು.

ಸ್ಪೀಕರ್ ಆಗಿ ಆಯ್ಕೆಗೊಂಡ ವೇಳೆ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲದಿದ್ದರೂ, ಪಕ್ಷದ ಯಾವುದೇ ವ್ಯವಹಾರಗಳಲ್ಲಿ ಭಾಗಿಯಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಸ್ಪೀಕರ್ ಸ್ಥಾನದಲ್ಲಿರುವ ವೇಳೆ ಯಾವುದೇ ಪಕ್ಷಕ್ಕೂ ಬೆಂಬಲ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತನ್ನ ಅಧಿಕಾರಾವಧಿಗಾಗಿ ಪಕ್ಷಕ್ಕೆ ತಾತ್ಕಾಲಿಕವಾಗಿ ರಾಜೀನಾಮೆ ನೀಡಲು, ಸ್ಪೀಕರ್‌ಗೆ ಅವರದೇ ಆದ ರೀತಿನೀತಿಯಿದೆ ಎಂದು ಹೇಳಿದರು.
ಮತ್ತಷ್ಟು
ಅಮೆರಿಕ ಕಂಪನಿಗೆ ದುರ್ಗಾಪೂಜೆ ಹಕ್ಕು
ಅಮರನಾಥ್ ವಿವಾದ: ಪೂಂಚ್‌ನಲ್ಲಿ ಕರ್ಫ್ಯೂ
ಉಗ್ರರಿಗೆ ಐಎಸ್ಐ ಸಂಪರ್ಕ: ತನಿಖೆ ಪ್ರಾರಂಭ
ಶನಿವಾರ ಜಮ್ಮುವಿಗೆ ಸರ್ವಪಕ್ಷ ನಿಯೋಗ
ವೋಟಿಗಾಗಿ ನೋಟು: ಪ್ರಧಾನಿಗೆ ನೋವು
ಅಮರನಾಥ್ ವಿವಾದ: ಬಿಜೆಪಿಯಿಂದ ಪ್ರತಿಭಟನೆ