ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೆದ್ದಾರಿ ಟ್ರಕ್ ಚಾಲಕರಿಗೆ ಕಾಫಿ ಬಿಸ್ಕಿಟ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆದ್ದಾರಿ ಟ್ರಕ್ ಚಾಲಕರಿಗೆ ಕಾಫಿ ಬಿಸ್ಕಿಟ್!
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ಕಾಂಚೀಪುರ ಜಿಲ್ಲಾಧಿಕಾರಿಯವರು ನೂತನ ವಿಧಾನವನ್ನು ಹಮ್ಮಿಕೊಂಡಿದ್ದು, ಟ್ರಕ್ ಚಾಲಕರಿಗೆ ಕಾಫಿ ಮತ್ತು ಬಿಸ್ಕಿಟ್ ಲಭಿಸುವ ವ್ಯವಸ್ಥೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಂದ ಆತಂಕಗೊಂಡಿರುವ ಹಿನ್ನೆಲೆಯಲ್ಲಿ, ಕಾಂಚೀಪುರಂ ಜಿಲ್ಲಾಧಿಕಾರಿ ಟ್ರಕ್ ಚಾಲಕರನ್ನು ಗುರಿಯಾಗಿಸಿಕೊಂಡು ಯೋಗಕ್ಷೇಮ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಟ್ರಕ್, ಲಾರಿ, ಟ್ಯಾಂಕರ್ ಮುಂತಾದ ವಾಹನಗಳನ್ನು ಚಲಾಯಿಸುವ ಚಾಲಕರಿಗೆ, ಸುರಕ್ಷಿತ ಚಾಲನೆಗಾಗಿ ಬಿಸ್ಕಿಟ್ ಮತ್ತು ಕಾಫಿ ನೀಡಲು ಸಾರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಾಗುವ ಟ್ರಕ್ ಚಾಲಕರಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಮುಂಜಾನೆ ನಾಲ್ಕರಿಂದ ಐದು ಗಂಟೆಯ ಸಮಯದಲ್ಲಿ ಸಾಮಾನ್ಯವಾಗಿ ಅಪಘಾತಗಳು ಸಂಭವಿಸುತ್ತದೆ. ಈ ಸಮಯದಲ್ಲಿ ಟ್ರಕ್‌ಗಳನ್ನು ನಿಲ್ಲಿಸಿ ಚಾಲಕರನ್ನು ವಾಹನಗಳಿಂದ ಇಳಿಯುವಂತೆ ಮಾಡಿ, ನೀರು, ಕಾಫಿ ಅಥವಾ ಚಹಾ ಮತ್ತು ಬಿಸ್ಕಿಟ್‌ನ್ನು ಅವರಿಗೆ ನೀಡಲಾಗುತ್ತದೆ ಎಂದು ಕಾಂಚೀಪುರಂ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಎಂ.ಸಂಪತ್ ಕುಮಾರ್ ತಿಳಿಸಿದ್ದಾರೆ.

ಇದರಿಂದ ಅವರಿಗೆ ಸತತ ಚಾಲನೆಯಿಂದ ಒಂದಿಷ್ಟು ವಿರಾಮ ಹಾಗೂ ಕೈಕಾಲುಗಳನ್ನು ನೀಡಲು ಅವಕಾಶ ಲಭಿಸುತ್ತದೆ, ಮತ್ತು ಈ ಮೂಲಕ ನಿದ್ದೆಯ ಮಂಪರಿನಿಂದ ಹೊರಬರುವ ಕಾರಣ ಅಪಘಾತಗಳನ್ನು ತಪ್ಪಿಸಬಹುದು ಎಂಬುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ,
ಮತ್ತಷ್ಟು
ಭಾರತಕ್ಕೆ ಮರಳಿದ ತಸ್ಲೀಮಾ ನಿಗೂಢ ಸ್ಥಳಕ್ಕೆ
ಮತ್ತೊಮ್ಮೆ ಸಿಪಿಎಂಗೆ ಸೇರಲಾರೆ ಚಟರ್ಜಿ
ಅಮೆರಿಕ ಕಂಪನಿಗೆ ದುರ್ಗಾಪೂಜೆ ಹಕ್ಕು
ಅಮರನಾಥ್ ವಿವಾದ: ಪೂಂಚ್‌ನಲ್ಲಿ ಕರ್ಫ್ಯೂ
ಉಗ್ರರಿಗೆ ಐಎಸ್ಐ ಸಂಪರ್ಕ: ತನಿಖೆ ಪ್ರಾರಂಭ
ಶನಿವಾರ ಜಮ್ಮುವಿಗೆ ಸರ್ವಪಕ್ಷ ನಿಯೋಗ