ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಭಾರತಕ್ಕೆ ಮರಳಲು ಸೌಲಭ್ಯ ಒದಗಿಸಿರುವ ಕೇಂದ್ರದ ಕ್ರಮದ ಬಗ್ಗೆ ಮುಸ್ಲಿಂ ಸಂಸ್ಥೆಗಳು ಟೀಕಾಪ್ರಹಾರ ನಡೆಸಿದ್ದು, ತಸ್ಲೀಮಾ ಅವರನ್ನು ದೇಶದಿಂದ ಗಡೀಪಾರು ಮಾಡುವಂತೆ ಶುಕ್ರವಾರ ಒತ್ತಾಯಿಸಿದೆ.
ತಸ್ಲೀಮಾ ಭಾರತಕ್ಕೆ ಮರಳಲು ಅವಕಾಶ ನೀಡಿರುವ ಕೇಂದ್ರದ ನಿರ್ಧಾರಿಂದ ಮುಸ್ಲಿಂ ಸಂಘಟನೆಯು ತೀವ್ರ ಬೇಸರಗೊಂಡಿದ್ದು, ವಿಶೇಷವಾಗಿ, ತಸ್ಲೀಮಾ ಅವರಿಗೆ ಭಾರತಕ್ಕೆ ಬರಲು ಅನುಮತಿ ನೀಡಿದ ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಅವರ ಮೇಲೆ ಅಸಮಧಾನ ಹೊಂದಿದೆ ಎಂದು ಆಲ್ ಇಂಡಿಯಾ ಮಾಜ್ಲಿಸ್ ಇ ಸುರಾ ಬ್ಯಾನರ್‌ನಡಿ ಮುಸ್ಲಿಂ ಸಂಘಟನೆಗಳು ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ.
ತಸ್ಲೀಮಾ ಅವರನ್ನು ಶೀಘ್ರವೇ ಭಾರತದಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿರುವ ಮುಸ್ಲಿಂ ಸಂಸ್ಥೆಯು, ಈ ಕುರಿತಾಗಿ ಕೇಂದ್ರದಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತದೆ ಎಂದು ಹೇಳಿದೆ.
ತಸ್ಲೀಮಾ ಅವರ ಹಿಂತಿರುಗುವಿಕೆಯು ಭಾರತದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್‌ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಿಜ್ ಮುಬಾರಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಸ್ಲೀಮಾ ಅವರು ಭಾರತಕ್ಕೆ ಮರಳಿರುವುದು ಅನಿರೀಕ್ಷಿತ ಮತ್ತು ದುರದೃಷ್ಟಕರ, ಇದನ್ನು ಭಾರತೀಯ ಮುಸ್ಲಿಮರು ಒಪ್ಪಿಕೊಳ್ಳುವುದಿಲ್ಲ ಎಂದು ಸರ್ವ ಭಾರತೀಯ ಅಲ್ಪಸಂಖ್ಯಾತ ಸಂಘಟನೆಯ ಅಧ್ಯಕ್ಷ ಇದ್ರಿಸ್ ಅಲಿ ಸ್ಪಷ್ಟಪಡಿಸಿದ್ದಾರೆ.
|