ಅಮರನಾಥ ದೇವಾಲಯಕ್ಕೆ ಜಮೀನು ಹಸ್ತಾಂತರ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ಅಮರನಾಥ ಯಾತ್ರಾ ಸಂಘರ್ಷ ಸಮಿತಿಯು(ಎಸ್ಎಎಸ್ಎಸ್), ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನೇತೃತ್ವದ ಸರ್ವಪಕ್ಷ ನಿಯೋಗದ ಮಾತುಕತೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ.
ಕಾಶ್ಮೀರ ನಾಯಕರ ಉಪಸ್ಥಿತಿಯನ್ನು ವಿರೋಧಿಸಿ, ಶನಿವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಲಾಗಿದ್ದು, ಮಾತುಕತೆಯನ್ನು ಅಮರನಾಥ ಸಂಘರ್ಷ ಸಮಿತಿಯು ಬಹಿಷ್ಕರಿಸಲಿದೆ ಎಂದು ಸಮಿತಿಯ ಮುಖ್ಯಸ್ಥ ಲೀಲಾ ಕರಣ್ ಶರ್ಮ ತಿಳಿಸಿದ್ದಾರೆ.
ಪ್ರಮುಖ ಕಾಶ್ಮೀರಿ ನಾಯಕರಾದ, ಸೈಫ್ ಉದ್‌ದಿನ್ ಸೋಜ್, ಮೆಹಬೂಬ್ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ರಾಜ್ಯದಲ್ಲಿನ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಶರ್ಮ, ಈ ಮೂವರು ತಪ್ಪಿತಸ್ಥರಾಗಿದ್ದು, ಇವರೊಂದಿಗೆ ಯಾವ ರೀತಿ ಮಾತುಕತೆಯನ್ನು ಮುಂದುವರಿಸಲಿ ಎಂದು ಪ್ರಶ್ನಿಸಿದ್ದಾರೆ.
ಅಮರನಾಥ ಸಂಘರ್ಷ ಸಮಿತಿಯೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ನೇತೃತ್ವದ ಸರ್ವಪಕ್ಷ ನಿಯೋಗವು ಜಮ್ಮುವಿಗೆ ತೆರಳಿದೆ.
ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
|