ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
NRB
ಹೊಗೇನಕಲ್ ಕುಡಿಯುವ ನೀರು ಯೋಜನೆಯು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ತಮಿಳುನಾಡು ಲೋಕೋಪಯೋಗಿ ಇಲಾಖಾ ಸಚಿವ ದುರೈಮುರುಗನ್ ತಿಳಿಸಿದ್ದಾರೆ.

ಈ ಯೋಜನೆಯಿಂದ ರಾಜ್ಯದ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಯ ಜನರಿಗೆ ಉಪಯೋಗವಾಗುವ ಹಿನ್ನೆಲೆಯಲ್ಲಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅತ್ಯಂತ ಉತ್ಸುಕರಾಗಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಯೋಜನೆಗೆ ಕರ್ನಾಟಕದ ವಿರೋಧದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಯಾವುದೇ ಸೂಕ್ಷ್ಮ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ. ಈ ಯೋಜನೆಯು ಸರಕಾರ ನಿಗದಿಪಡಿಸಿದ ವೇಳೆಯಲ್ಲಿಯೇ ಪೂರ್ಣಗೊಳ್ಳುವುದು ಸ್ಪಷ್ಟ ಎಂದಿದ್ದಾರೆ.

ಯೋಜನೆಯು ನಿಗದಿಯಂತೆಯೇ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಈ ಕುರಿತಾಗಿ ಕರ್ನಾಟಕಕ್ಕೆ ಅಥವಾ ಕೇಂದ್ರಕ್ಕೆ ಯಾವುದೇ ಪತ್ರ ಬರೆಯುವ ಅಗತ್ಯವಿಲ್ಲ ಎಂಬುದಾಗಿ ಇತ್ತೀಚೆಗೆಸ್ಪಷ್ಟಪಡಿಸಿದ್ದರು.

ಸುಮಾರು 1,334 ಕೋಟಿ ರೂ. ವೆಚ್ಚದ ಈ ಯೋಜನೆಯು ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಯ 40.4 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಿದೆ.
ಮತ್ತಷ್ಟು
ಎಸ್ಎಎಸ್ಎಸ್‌ನಿಂದ ಸರ್ಪಪಕ್ಷ ಸಭೆ ಬಹಿಷ್ಕಾರ
ತಸ್ಲೀಮಾ ಮರಳುವಿಕೆಗೆ ಮುಸ್ಲಿಮರ ವಿರೋಧ
ಹೆದ್ದಾರಿ ಟ್ರಕ್ ಚಾಲಕರಿಗೆ ಕಾಫಿ ಬಿಸ್ಕಿಟ್!
ಭಾರತಕ್ಕೆ ಮರಳಿದ ತಸ್ಲೀಮಾ ನಿಗೂಢ ಸ್ಥಳಕ್ಕೆ
ಮತ್ತೊಮ್ಮೆ ಸಿಪಿಎಂಗೆ ಸೇರಲಾರೆ ಚಟರ್ಜಿ
ಅಮೆರಿಕ ಕಂಪನಿಗೆ ದುರ್ಗಾಪೂಜೆ ಹಕ್ಕು