ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ
ಉತ್ತಮ ಬೆಳವಣಿಗೆಯೆಂಬಂತೆ, ಭಾರತೀಯ ಬಾಡಿಗೆ ತಾಯಿಗೆ ಜನಿಸಿದ 14 ದಿನಗಳ ಜಪಾನೀಸ್ ಮಗು ಮಂಜಿಗೆ ಜೈಪುರ ಮಹಾನಗರ ಪಾಲಿಕೆಯು ಜನನ ಪ್ರಮಾಣಪತ್ರವನ್ನು ನೀಡಿದೆ. ಜನನ ಪ್ರಮಾಣ ಪತ್ರದಲ್ಲಿ ಜಪಾನೀ ಮೂಲದ ಮಗುವಿನ ತಂದೆಯ ಹೆಸರನ್ನು ನಮೂದಿಸಿದ್ದು, ಆದರೆ, ತಾಯಿಯ ಹೆಸರಿನ ಜಾಗವನ್ನು ಖಾಲಿ ಬಿಡಲಾಗಿದೆ.

ಈ ಬೆಳವಣಿಗೆಯು ಮಂಜಿಗೆ ಜಪಾನ್‌ಗೆ ತೆರಳಲು ಅನುಕೂಲ ಮಾಡಿಕೊಡಲಿದೆ. ಈವರೆಗೆ, ಹಸುಳೆ ಮಂಜಿಗೆ ಪಾಸ್‌ಪೋರ್ಟ್ ಇಲ್ಲದ ಕಾರಣ ಆಕೆಯನ್ನು ಜಪಾನ್‌ಗೆ ಕರೆದೊಯ್ಯಲು ಆಕೆಯ ವೈದ್ಯ ತಂದೆಗೆ ತೊಡಕುಂಟಾಗಿತ್ತು.

ಮಂಜಿಯ ಪೋಷಕರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು. ಮಗು ಬೇಕೆಂದು ಅಹಮದಾಬಾದಿನ ಬಾಡಿಗೆ ತಾಯನ್ನು ಸಂಪರ್ಕಿಸಿದರು. ಆದರೆ, ಬಾಡಿಗೆ ತಾಯಿಗೆ ಮಗು ಜನಿಸುವ ಒಂದು ತಿಂಗಳ ಹಿಂದೆ ಪರಸ್ಪರ ವಿಚ್ಚೇದನ ನೀಡಿದ್ದರು.

ಮಗು ಜನಿಸಿದ ಬೆನ್ನಲ್ಲೇ, ಅಹಮದಾಬಾದಿನಲ್ಲಿ ಸರಣಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ, ಮಗುವನ್ನು ಆರೈಕೆಗಾಗಿ ಜೈಪುರಕ್ಕೆ ಕಳುಹಿಸಲಾಗಿತ್ತು.

ಮಗುವನ್ನು ಜಪಾನಿಗೆ ಕರೆದುಕೊಂಡು ಹೋಗಲು ಮಗುವಿನ ತಂದೆಯು ಬಯಸಿದ್ದು ಕಾನೂನು ತೊಡಕು ಎದುರಾಗಿತ್ತು. ಆದರೆ ಇದೀಗ ಜನನ ಪತ್ರ ದೊರೆಯುತ್ತಲೇ ಅವರ ವೀಸಾ ಅವಧಿ ಮುಗಿದಿದೆ. ಹಾಗಾಗಿ ಅವರು ಜಪಾನ್‌ಗೆ ತುರ್ತಾಗಿ ತೆರಳಲೇಬೇಕಾಗಿದೆ.

ಮಗುವಿನ ಆರೈಕೆಯನ್ನು ಉತ್ತಮವಾಗಿ ಮಾಡಲಾಗುತ್ತಿದೆ ಎಂದು ಮಗುವನ್ನು ನೋಡಿಕೊಳ್ಳುತ್ತಿರುವ ಆರ್ಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮತ್ತಷ್ಟು
ಆಂಧ್ರಪ್ರದೇಶ: ವರುಣನ ಅಬ್ಬರಕ್ಕೆ 13 ಬಲಿ
ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
ಎಸ್ಎಎಸ್ಎಸ್‌ನಿಂದ ಸರ್ಪಪಕ್ಷ ಸಭೆ ಬಹಿಷ್ಕಾರ
ತಸ್ಲೀಮಾ ಮರಳುವಿಕೆಗೆ ಮುಸ್ಲಿಮರ ವಿರೋಧ
ಹೆದ್ದಾರಿ ಟ್ರಕ್ ಚಾಲಕರಿಗೆ ಕಾಫಿ ಬಿಸ್ಕಿಟ್!
ಭಾರತಕ್ಕೆ ಮರಳಿದ ತಸ್ಲೀಮಾ ನಿಗೂಢ ಸ್ಥಳಕ್ಕೆ