ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿಯಲ್ಲಿ ಐವರು ಲಷ್ಕರೆ ಉಗ್ರರು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಯಲ್ಲಿ ಐವರು ಲಷ್ಕರೆ ಉಗ್ರರು?
ಲಷ್ಕರ್-ಇ-ತೊಯ್ಬಾದ ಐದು ಉಗ್ರಗಾಮಿಗಳು ರಾಜಧಾನಿ ದೆಹಲಿಯಲ್ಲಿ ಅವಿತುಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಯ ವೇಳೆ ದೆಹಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸಲು ಸಂಚು ಹೂಡಿದ್ದಾರೆ ಎಂಬ ಮಾಹಿತಿ ಗುಪ್ತಚರದಳಕ್ಕೆ ಲಭಿಸಿದೆ ಎನ್ನಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ತ್ರಿವರ್ಣ ಧ್ವಜವನ್ನು ಏರಿಸುವ ರೆಡ್ ಫೋರ್ಟ್‌ಗೆ ಸಮೀಪದ ಚಾಂದಿನಿ ಚೌಕ್ ಉಗ್ರರ ಮುಖ್ಯ ಗುರಿಯಾಗಿರುವುದಾಗಿ ನಂಬಲಾಗಿದೆ.

ಇದರೊಂದಿಗೆ, ಜನನಿಬಿಡ ಮಾರುಕಟ್ಟೆಗಳಾದ ಕರೋಲ್ ಬಾಗ್, ಸರೋಜಿನಿ ನಗರ್ ಮಾರುಕಟ್ಟೆ, ಮತ್ತು ಬಸ್ ಹಾಗೂ ರೈಲ್ವೇ ನಿಲ್ದಾಣಗಳ ಮೇಲೆ ಉಗ್ರಗಾಮಿಗಳು ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಜಾಫರ್ ಎಂಬ ಹೆಸರಿನ ಲಷ್ಕರೆ ಉಗ್ರ ಜಮ್ಮು ಕಾಶ್ಮೀರದ ಮೂಲಕ ಐದು ಉಗ್ರಗಾಮಿಗಳನ್ನು ದೆಹಲಿಗೆ ಕಳುಹಿಸಿರುವುದಾಗಿ ಹೇಳಲಾಗಿದೆ. ಇದರಲ್ಲಿ ಮೂವರು ಜಹೂರ್, ಅಲ್ತಾಫ್ ಮತ್ತು ಖುರ್ಷಿದ್ ಎಂದು ತಿಳಿದುಬಂದಿದೆಯೆನ್ನಲಾಗಿದೆ.

ಇನ್ನೊಬ್ಬನನ್ನು ಆಯೂಬ್ ಐಟೂ ಎಂದು ತಿಳಿದುಕೊಳ್ಳಲಾಗಿದ್ದು, ಈತ ಆರ್‌ಡಿಎಕ್ಸ್ ಮತ್ತು ಹಣವನ್ನು ಉಗ್ರಗಾಮಿಗಳಿಗೆ ಪೂರೈಕೆ ಮಾಡುವಲ್ಲಿ ಭಾಗಿಯಾಗಿರುವುದಾಗಿ ಅಂದಾಜಿಸಲಾಗಿದೆ.

ಈ ಮಾಹಿತಿಗಳ ಹಿನ್ನೆಲೆಯಲ್ಲಿ, ದೆಹಲಿಯ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿವಿಧ ಪ್ರವೇಶ ಪ್ರದೇಶಗಳಲ್ಲಿ ತಪಾಸಣೆಯನ್ನು ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮಾರುಕಟ್ಟೆ ಪ್ರದೇಶ, ಬಸ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಪೊಲೀಸರು ಕಣ್ಗಾವಲಿಟ್ಟಿದ್ದಾರೆ.
ಮತ್ತಷ್ಟು
ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ
ಆಂಧ್ರಪ್ರದೇಶ: ವರುಣನ ಅಬ್ಬರಕ್ಕೆ 13 ಬಲಿ
ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
ಎಸ್ಎಎಸ್ಎಸ್‌ನಿಂದ ಸರ್ಪಪಕ್ಷ ಸಭೆ ಬಹಿಷ್ಕಾರ
ತಸ್ಲೀಮಾ ಮರಳುವಿಕೆಗೆ ಮುಸ್ಲಿಮರ ವಿರೋಧ
ಹೆದ್ದಾರಿ ಟ್ರಕ್ ಚಾಲಕರಿಗೆ ಕಾಫಿ ಬಿಸ್ಕಿಟ್!