ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಎಸ್‌ಪಿ, ನಟ್ವರ್ ಸಿಂಗ್, ಮಾಯಾವತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್‌ಪಿ, ನಟ್ವರ್ ಸಿಂಗ್, ಮಾಯಾವತಿ
PIB
ಆಹಾರಕ್ಕಾಗಿ ತೈಲ ಹಗರಣದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದ ಮಾಜಿ ವಿದೇಶಾಂಗ ಸಚಿವ, ಹಾಗೂ ಕಾಂಗ್ರಸ್ ನಾಯಕ ಕೆ.ನಟ್ವರ್ ಸಿಂಗ್ ಅವರು ಶನಿವಾರ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ ಸೇರಿದ್ದಾರೆ.

ನಟ್ಟರ್ ಸಿಂಗ್ ಅವರೊಂದಿಗೆ, ಶಾಹಿದ್ ಸಿದ್ದಿಕಿ ಹಾಗೂ ಎಸ್.ಪಿ.ಸಿಂಗ್ ಬಘೇಲ್ ಅವರೂ ಬಿಎಸ್‌ಪಿ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಯಾವತಿ ಉಪಸ್ಥಿತರಿದ್ದರು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಬೃಹತ್ ಸಮಾವೇಶದಲ್ಲಿ ಸಿದ್ಧಿಕಿ ಮತ್ತು ಬಘೇಲ್ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು.

ಆಹಾರಕ್ಕಾಗಿ ತೈಲ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಸಿಂಗ್ ಇದರಿಂದಾಗಿಯೇ ತನ್ನ ಸ್ಥಾನ ತೊರೆಯಬೇಕಾಗಿ ಬಂದಿತ್ತು. ರಾಜ್ಯಸಭಾ ಸದಸ್ಯರಾಗಿದ್ದ ಅವರ ಅವಧಿ ಇತ್ತೀಚೆಗೆ ಕೊನೆಗೊಂಡಿತ್ತು.

ಸಮಾಜವಾದಿ ಪಕ್ಷದಲ್ಲಿದ್ದ ಸಿದ್ದಿಕಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಮುನ್ನ ಪಕ್ಷ ತೊರೆದಿದ್ದರು. ಬಘೇಲ್ ಅವರು ಸಮಾಜವಾದಿ ಪಕ್ಷ ನೀಡಿರುವ ವಿಪ್ ಉಲ್ಲಂಘಿಸಿ ಸರಕಾರದ ವಿರುದ್ಧ ಮತಚಲಾಯಿಸಿದ್ದರು. ಈ ಇಬ್ಬರೂ ಪಕ್ಷದಿಂದ ಉಚ್ಚಾನೆಗೊಂಡಿದ್ದರು.
ಮತ್ತಷ್ಟು
ದೆಹಲಿಯಲ್ಲಿ ಐವರು ಲಷ್ಕರೆ ಉಗ್ರರು?
ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ
ಆಂಧ್ರಪ್ರದೇಶ: ವರುಣನ ಅಬ್ಬರಕ್ಕೆ 13 ಬಲಿ
ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
ಎಸ್ಎಎಸ್ಎಸ್‌ನಿಂದ ಸರ್ಪಪಕ್ಷ ಸಭೆ ಬಹಿಷ್ಕಾರ
ತಸ್ಲೀಮಾ ಮರಳುವಿಕೆಗೆ ಮುಸ್ಲಿಮರ ವಿರೋಧ