ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನೇ ಮುಂದಿನ ಪ್ರಧಾನಿ: ಮಾಯಾವತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನೇ ಮುಂದಿನ ಪ್ರಧಾನಿ: ಮಾಯಾವತಿ
ಪ್ರಧಾನಿ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು,ತಾವು ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಪಕ್ಷದ ಬಲವನ್ನು ವೃದ್ಧಿಸುವತ್ತ ಗಮನಹರಿಸಿರುವ ಮಾಯಾವತಿ ಅವರು, ಬೃಹತ್ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದ ಬಿಎಸ್ಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಸಮೂಹವನ್ನುದ್ದೇಶಿಸಿ ಮಾತನಾಡಿದರು.

ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಹಾಗಿದ್ದರೆ, ಪ್ರಧಾನಿಯಾಗಲು ಏಕೆ ಸಾಧ್ಯವಿಲ್ಲ, ಸರ್ವ ಸಮಾಜದ ಜನತೆ ಬಿಎಸ್ಪಿಗೆ ಬೆಂಬಲ ನೀಡಿದರೆ ನಾನು ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಯುಪಿಎ ಮತ್ತು ಎನ್‌ಡಿಎಗಳನ್ನು ಜಾತಿಯಾಧಾರಿತ ಪಕ್ಷಗಳು ಎಂದು ಹರಿಹಾಯ್ದ ಮಾಯಾವತಿ, ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ವೇಳೆ ತನ್ನ ವಿರುದ್ಧ ಪಿತೂರಿ ನಡೆಸಿ ದಲಿತ ಮಹಿಳೆಯೋರ್ವಳು ಪ್ರಧಾನಿಯಾಗುವುದನ್ನು ತಡೆಯಲಾಯಿತು ಎಂದು ಕಿಡಿಕಾರಿದರು.
ಮತ್ತಷ್ಟು
ಬಿಎಸ್‌ಪಿ, ನಟ್ವರ್ ಸಿಂಗ್, ಮಾಯಾವತಿ
ದೆಹಲಿಯಲ್ಲಿ ಐವರು ಲಷ್ಕರೆ ಉಗ್ರರು?
ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ
ಆಂಧ್ರಪ್ರದೇಶ: ವರುಣನ ಅಬ್ಬರಕ್ಕೆ 13 ಬಲಿ
ಹೊಗೇನಕಲ್: ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣ
ಎಸ್ಎಎಸ್ಎಸ್‌ನಿಂದ ಸರ್ಪಪಕ್ಷ ಸಭೆ ಬಹಿಷ್ಕಾರ