ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ: ಯಾರಿಗೂ ಧಕ್ಕೆಯಾಗದಂತೆ ಪರಿಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ: ಯಾರಿಗೂ ಧಕ್ಕೆಯಾಗದಂತೆ ಪರಿಹಾರ
PIB
ಅಮರನಾಥ ವಿವಾದದಿಂದಾಗಿ ಕೋಮುಸೌಹಾರ್ದತೆಗೆ ಧಕ್ಕೆಯುಂಟಾಗುವುದಿಲ್ಲ ಎಂದು ಭರವಸೆ ನೀಡಿರುವ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಈ ವಿವಾದವನ್ನು ಉಭಯ ಪ್ರದೇಶಗಳಾದ ಜಮ್ಮು ಅಥವಾ ಕಾಶ್ಮೀರದ ಯಾವುದೇ ಜನತೆಗೂ ನೋವುಂಟಾಗದಂತೆ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

ಶ್ರೀನಗರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸಮಸ್ಯೆಯನ್ನು ಜಮ್ಮು ಮತ್ತು ಕಾಶ್ಮೀರದ ಜನತೆಯ ಭಾವನೆಗಳಿಗೆ ನೋವುಂಟಾಗದಂತೆ ಪರಿಹರಿಸುವಲ್ಲಿ ನಾವು ನಿಶ್ಚಿತವಾಗಿಯೂ ಕ್ರಮಕೈಗೊಳ್ಳಲಿದ್ದೇವೆ ಎಂದು ಅವರು ನುಡಿದರು.

ಅಮರನಾಥ ಯಾತ್ರೆಯು ಈ ಹಿಂದಿನಂತೆಯೇ ಮುಂದುವರಿಯಲಿ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪಕ್ಷಗಳೂ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದರು.

ಪರಿಸ್ಥಿತಿಗೆ ಕೋಮು ಬಣ್ಣ ಹಚ್ಚಬಾರದು. ಇಂತಹ ಕೆಲವು ಘಟನೆಗಳು ಇದ್ದಾವಾದರೂ ಇವುಗಳನ್ನು ನಿಭಾಯಿಸುವುದಾಗಿ ಅವರು ನುಡಿದರು.

ರಾಜ್ಯದಲ್ಲಿ ಸಂಭವಿಸುವ ಘಟನೆಗಳ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಅತ್ಯಂತ ಸೂಕ್ಷ್ಮವಾಗಿರಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಗಲಭೆಯ ಬಲಿಪಶುಗಳಿಗೆ ಪರಿಹಾರ ನೀಡುವುದಾಗಿ ಅವರು ನುಡಿದರು. ಎಡೆಬಿಡದೆ ನಡೆದ ಮುಷ್ಕರದ ವೇಳೆಗೆ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಗಳಿಗೆ ಪರಿಹಾರ ನೀಡುವುದಾಗಿ ಪಾಟೀಲ್ ಸ್ಪಷ್ಟಪಡಿಸಿದರು.
ಮತ್ತಷ್ಟು
ಕೋಟಾ ಮಂದಿರ ದುರಂತ: 1 ಸಾವು, 135 ಗಾಯ
ವರ್ಷಧಾರೆಗೆ ಆಂಧ್ರ ಜನಜೀವನ ಅಸ್ತವ್ಯಸ್ತ
ನಾನೇ ಮುಂದಿನ ಪ್ರಧಾನಿ: ಮಾಯಾವತಿ
ಬಿಎಸ್‌ಪಿ, ನಟ್ವರ್ ಸಿಂಗ್, ಮಾಯಾವತಿ
ದೆಹಲಿಯಲ್ಲಿ ಐವರು ಲಷ್ಕರೆ ಉಗ್ರರು?
ಜಪಾನಿಗೆ ಮಗು 'ಮಂಜಿ'ಗೆ ಜನನ ಪ್ರಮಾಣ ಪತ್ರ