ಜಮ್ಮು: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹಣ್ಣಿನ ಬೆಳೆಗಾರರು, ವ್ಯಾಪಾರಿಗಳು ಮತ್ತು ಹುರಿಯತ್ ಸಂಘಟನೆಯ ಸದಸ್ಯರು ಸಾಗಲು ಯತ್ನಿಸಿದಾಗ ಪೊಲೀಸರು ತಡೆದಿದ್ದು, ಈ ವೇಳೆ ಸಂಭವಿಸಿರುವ ಘರ್ಷಣೆಯಲ್ಲಿ ಓರ್ವವ್ಯಕ್ತಿ ಮೃತಪಟ್ಟಿದ್ದು, ಇತರ 15 ಮಂದಿ ಗಾಯಗೊಂಡಿದ್ದಾರೆ.
ಹಣ್ಣು ತುಂಬಿದ ಲಾರಿಗಳ ಮೆರವಣಿಗೆಯನ್ನು ಮುಜಾಫರಾಬಾದ್‌ನತ್ತ ನಡೆಸಲು ರಾಜಕೀಯ, ಧಾರ್ಮಿಕ ನಾಯಕರು ಮತ್ತು ಹಣ್ಣು ಬೆಳೆಗಾರರು ಪ್ರಯತ್ನಿಸುತ್ತಿದ್ದ ವೇಳೆಗೆ ಈ ಘರ್ಷಣೆ ಸಂಭವಿಸಿದೆ. ಅಮರನಾಥ ಭೂವಿವಾದದ ಹಿನ್ನೆಲೆಯಲ್ಲಿ ಉಂಟಾಗಿರುವ 'ಆರ್ಥಿಕ ತಡೆ'ಗೆ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಈ ಮೆರವಣಿಗೆ ಆಯೋಜಿಸಲಾಗಿತ್ತು.
ಹಣ್ಣಿನ ಮಂಡಿಗಳನ್ನು ಮುಟ್ಟುಗೋಲು ಹಾಕಲಾಗಿದೆ ಮತ್ತು ಹಣ್ಣು ತುಂಬಿದ ಲಾರಿಗಳಲ್ಲಿ ಕೆಲವನ್ನು ಭದ್ರತಾಪಡೆಗಳು ವಶಪಡಿಸಿಕೊಂಡಿದ್ದರೆ ಇನ್ನು ಕೆಲವು ಲಾರಿಗಳ ಗಾಳಿತೆಗೆಯಲಾಗಿದೆ. ಪ್ರತಿಭಟನಾಕಾರರನ್ನು ತಡೆಯಲು ಭದ್ರತಾ ಪಡೆಗಳು ಬೃಹತ್ ತಡೆ ಒಡ್ಡಿದ್ದು, ರಸ್ತೆಯನ್ನು ಸಂಪೂರ್ಣವಾಗಿ ತಡೆದಿದ್ದಾರೆ.
ಸೋಮವಾರದ ಮುಜಾಫರ್ ಚಲೋ ಕಾರ್ಯಕ್ರದ ಹಿನ್ನೆಲೆಯಲ್ಲಿ ಭಾನುವಾರವೆ ಹುರಿಯತ್ ಕಾನ್ಫರೆನ್ಸಿನ ಮಿರ್ವಾಯಿಜ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.
|