ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು: ಎಸ್ಪಿ ಸಂಸದಗೆ ಸಮನ್ಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು: ಎಸ್ಪಿ ಸಂಸದಗೆ ಸಮನ್ಸ್
PTI
'ವೋಟಿಗಾಗಿ ನೋಟು' ಪ್ರಕರಣದ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು, ಸಮಾಜವಾದಿ ಪಕ್ಷದ ಸಂಸದ ರಿಯೋಟಿ ಹಾಗೂ ಇತರ ಮೂವರನ್ನು ಸಮಿತಿಯ ಎದರು ಆಗಸ್ಟ್ 18ರಂದು ಹಾಜರಾಗುವಂತೆ ಆದೇಶಿಸಿ ಸಮನ್ಸ್ ನೀಡಲು ನಿರ್ಧರಿಸಿದೆ.

ವೋಟಿಗಾಗಿ ನೋಟು ಕುರಿತು ದೂರು ನೀಡಿರುವ ಮೂವರು ಬಿಜೆಪಿ ಸಂಸದರು ರಮಣ್ ಸಿಂಗ್ ಅವರ ಹೆಸರನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಜುಲೈ 22ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲಿಸಲು ಸಹಕಾರ ಕೋರಿ ಲಂಚದ ರೂಪದಲ್ಲಿ ನೀಡಲಾದ ಹಣವೆಂದು ಆರೋಪಿಸಿರುವ ಮೂವರು ಸಂಸದರು ಲೋಕಸಭೆಯಲ್ಲಿ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿದ್ದರು.

ರಮಣ್ ಸಿಂಗ್ ಅವರು ಅಲಹಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇವರು ಸುಧೀಂದ್ರ ಕುಲಕರ್ಣಿ(ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರ ಮಾಜಿ ಸಹಚರ), ಸಂಜೀವ್ ಸಕ್ಸೇನಾ ಹಾಗೂ ಸೋಹಲ್ ಅಲಿಯಾಸ್ ರಾಜಾ ಹಿಂದುಸ್ಥಾನಿ ಅವರೊಂದಿಗೆ ಸಮಿತಿಯ ಎದುರು ಹಾಜರಾಗಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಕಿಶೋರ್ ಚಂದ್ರ ದೇವ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಆಪಾದನೆ ಮಾಡಿರುವ ಅಶೋಕ್ ಅರ್ಗಲ್ ಮತ್ತು ಫಗನ್ ಸಿಂಗ್ ಕುಲಸ್ತೆ ಅವರುಗಳು ಈಗಾಗಲೇ ಸಮಿತಿಯ ಮುಂದೆ ಹಾಜರಾಗಿದ್ದಾರೆ. ಇನ್ನೋರ್ವ ಸಂಸದ ಮಹವೀರ್ ಬಗೋರ ಅವರು ಆಸ್ಪತ್ರೆ ಸೇರಿರುವ ಕಾರಣ ಅವರನ್ನು ಇನ್ನಷ್ಟೆ ವಿಚಾರಣೆಗೊಳಪಡಿಸಬೇಕಾಗಿದೆ.

ಈ ಪ್ರಕರಣದ ಕುಟುಕು ಕಾರ್ಯಾಚರಣೆ ನಡೆಸಿರುವ ಸಿಎನ್ಎನ್-ಐಬಿಎನ್‌ನ ಸಂಪಾದಕ ರಾಜ್‌ದೀಪ್ ಸರ್ದೇಸಾಯ್ ಹಾಗೂ ಇತರ ಐವರು ಸಿಬ್ಬಂದಿಗಳು ಸೋಮವಾರ ಸಮಿತಿಯ ಮುಂದೆ ಹಾಜರಾಗಿದ್ದರು. ಸರ್ದೇಸಾಯ್ ಅವರು ಪ್ರಕರಣದ ಕುರಿತಂತೆ ಇನ್ನೂ ಎರಡು ಸಿಡಿಗಳನ್ನು ನೀಡಿರುವುದಾಗಿ ಕಿಶೋರ್ ಚಂದ್ರ ದೇವ್ ಹೇಳಿದ್ದಾರೆ. ಆದರೆ ಈ ಕುರಿತು ಯಾವುದೇ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
ಮತ್ತಷ್ಟು
ಪಂಜಾಬ್ ಹೈ.ಕೋ ಮು.ನ್ಯಾಯಾಧೀಶರಾಗಿ ಠಾಕೂರ್
ಜಮ್ಮು: ಪೊಲೀಸರೊಂದಿಗೆ ವ್ಯಾಪಾರಿಗಳ ಘರ್ಷಣೆ, 1 ಸಾವು
ಸ್ವಾತಂತ್ರ್ಯ ದಿನಾಚರಣೆ: ದೆಹಲಿಯಲ್ಲಿ ಕಟ್ಟೆಚ್ಚರ
ಸಾಲ ಮನ್ನಾ ಫಲಾನುಭವಿಗಳಿಗೆ ಪ್ರಧಾನಿ ಪತ್ರ
ಅಮರನಾಥ: ಯಾರಿಗೂ ಧಕ್ಕೆಯಾಗದಂತೆ ಪರಿಹಾರ
ಕೋಟಾ ಮಂದಿರ ದುರಂತ: 1 ಸಾವು, 135 ಗಾಯ