ಶ್ರೀನಗರ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಹುರಿಯತ್ ಕಾನ್ಫರೆನ್ಸ್ ಮುಖಂಡ ಶೇಕ್ ಅಬ್ದುಲ್ ಅಜೀಜ್ ಬಲಿಯಾಗುವ ಮೂಲಕ ಜಮ್ಮು ಹಿಂಸಾಚಾರ ಭುಗಿಲೆದ್ದಿದ್ದು, ನಗರದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.
ಅಮರನಾಥ್ ಭೂ ವಿವಾದದ ಕಿಚ್ಚು ಜಮ್ಮುವಿನಾದ್ಯಂತ ಹೊತ್ತಿ ಉರಿಯುತ್ತಿದ್ದು,ಸೋಮವಾರ ಹಿಂಸಾಚಾರ ಮತ್ತಷ್ಟು ಮುಂದುವರಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಈ ಮೊದಲು ಇಬ್ಬರು ಬಲಿಯಾಗಿದ್ದು,150ಮಂದಿ ಗಾಯಗೊಂಡಿದ್ದರು.
ಕಣಿವೆ ಪ್ರದೇಶದ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂಧನವನ್ನು ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದತ್ತ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ನುಗ್ಗಲು ಪ್ರಯತ್ನಿಸಿದ ಸಂದರ್ಭದಲ್ಲಿ ರಕ್ಷಣಾ ಪಡೆ ನಡುವೆ ಘರ್ಷಣೆ ನಡೆಯುವ ಮೂಲಕ ಹಿಂಸಾಚಾರ ಸ್ಫೋಟಿಸಿತ್ತು.
ಪರಿಸ್ಥಿತಿ ಮೇರೆ ಮೀರಿದಾಗ ಪೊಲೀಸರು ಮುಜಾಫರ್‌ಬಾದ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸ್ ಪಡೆ ಅಶ್ರುವಾಯು,ಲಾಠಿ ಪ್ರಹಾರ ನಡೆಸಿದರೂ ಅದಕ್ಕೆ ಜಗ್ಗದಿದ್ದಾಗ ಗೋಲಿಬಾರ್ ನಡೆಸಲಾಗಿತ್ತು. ಆ ಕಾರಣಕ್ಕಾಗಿ ಬಾರಾಮುಲ್ಲಾ ಜಿಲ್ಲೆಯ ಶ್ರೀನಗರ ಮತ್ತು ಮುಜಾಫರ್‌ನಗರದ ರಸ್ತೆಯ ಸುಮಾರು 40ಕಿ.ಮೀ.ವರೆಗೆ ಕರ್ಫ್ಯೂ ವಿಧಿಸಲಾಗಿದೆ.
|