ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ: ಮತ್ತೆ ಸರ್ವಪಕ್ಷಗಳ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ: ಮತ್ತೆ ಸರ್ವಪಕ್ಷಗಳ ಸಭೆ
ಸೋಮವಾರದ ಪ್ರತಿಭಟನಾ ಜಾಥಾದ ವೇಳೆ ಹಿರಿಯ ಹುರಿಯತ್ ನಾಯಕ ಸೇರಿದಂತೆ ಐದು ಮಂದಿ ಹತರಾಗಿರುವ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಮಂಗಳವಾರವೂ ಸರ್ವಪಕ್ಷ ಸಭೆ ಕರೆಯಲಾಗಿದೆ.

ಹುರಿಯತ್ ನಾಯಕ ಶೇಕ್ ಅಬ್ದುಲ್ ಅಜೀಜ್ ಅವರು ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಗುಂಟೇಟು ತಗುಲಿ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದಾರೆ. ಅವರು ಬಾರಾಮುಲ್ಲಾ ಜಿಲ್ಲೆಯ ಚಾಹಲ್ ಗ್ರಾಮದಲ್ಲಿ ಪ್ರತಿಭಟನಾ ನಿರತರಾಗಿದ್ದರು.

ಇವರು ಹಣ್ಣು ಬೆಳೆಗಾರರು ಶ್ರೀನಗರದಿಂದ ಮುಜಾಫರಾಬಾದ್‌ ತನಕ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡಿದ್ದರು. ಇತರ ನಾಲ್ವರು ಶ್ರೀನಗರದಿಂದ ಮುಜಾಫರಾಬಾದ್‌‌ ತನಕದ ಹೆದ್ದಾರಿಯಲ್ಲಿ ವಿವಿಧೆಡೆ ಸಂಭವಿಸಿರುವ ಪೊಲೀಸ್ ಗುಂಡು ಹಾರಾಟದಲ್ಲಿ ಮೃತರಾಗಿದ್ದಾರೆ.

ಮೊದಲಿಗೆ ಶ್ರೀನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಆದರೆ ಹುರಿಯತ್ ನಾಯಕನ ಸಾವಿನ ಬಳಿಕ ಸಂಭವಿಸಬಹುದಾದ ಗಲಭೆಯಿಂದ ಬೆದರಿದ ಪೊಲೀಸರು ಜಿಲ್ಲೆಯಾದ್ಯಂತ ಕರ್ಫ್ಯೂ ಹೇರಿದ್ದಾರೆ. ಏತನ್ಮಧ್ಯೆ, ಮೃತನಾಯಕನ ಗೌರವಾರ್ಥ ಶೋಕಾಚರಣೆಗೆ ಅನುಕೂಲವಾಗುವಂತೆ ಕರ್ಫ್ಯೂ ಕಿತ್ತುಹಾಕಬೇಕು ಎಂದು ಹುರಿಯತ್ ವರಿಷ್ಠ ಉಮಕ್ ಫಾರೂಕ್ ಒತ್ತಾಯಿಸಿದ್ದಾರೆ.

ಸರ್ವಪಕ್ಷಗಳ ಸಭೆ
ಅಮರನಾಥ ವಿವಾದ ಪರಿಹಾರಕ್ಕಾಗಿ ಸೋಮವಾರ ಸರ್ವಪಕ್ಷ ಸಭೆಯು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದು, ಮಂಗಳವಾರ ಮತ್ತೆ ಸಭೆ ಸೇರಲಿದೆ.

ಒಂದೂವರೆ ಗಂಟೆಗಳ ಕಾಲದ ಸಭೆಯು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ ಎಂದು ಹೇಳಿರುವ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಮಂಗಳವಾರ ಮತ್ತೆ ಸಭೆ ಸೇರುವುದಾಗಿ ಹೇಳಿದ್ದಾರೆ.

ಸೋಮವಾರದ ಸಭೆಯಲ್ಲಿ, ಸಮಸ್ಯೆ ಪರಿಹಾರಕ್ಕಾಗಿ ವಿವಿಧ ಪಕ್ಷಗಳ ನಾಯಕರು, ವಿವಿಧ ಸಲಹೆಗಳನ್ನು ನೀಡಿದರಾದರೂ, ವಿರೋಧ ಪಕ್ಷ ಬಿಜೆಪಿಯನ್ನು ಪ್ರತಿನಿಧಿಸಿರುವ ಅರುಣ್ ಜೇಟ್ಲಿ ಅವರು ಜಮ್ಮು ಕಾಶ್ಮೀರ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿರುವ ಆದೇಶದ ಜಾರಿಗಾಗಿ ಒತ್ತಾಯಿಸಿದರು.

ಈ ಆದೇಶದ ಪ್ರಕಾರ ವಿವಾದಿತ ಭೂಮಿಯನ್ನು ಎರಡು ತಿಂಗಳ ಅಮರನಾಥ ಯಾತ್ರಾ ವೇಳೆಗೆ ಅಮರನಾಥ್ ಮಂದಿರ ಮಂಡಳಿಗೆ, ಒಪ್ಪಿಸಬೇಕು. ಅದಾಗ್ಯೂ, ಆದೇಶದ ಪ್ರಕಾರ ಜಮೀನಿನ ಮಾಲಿಕತ್ವದಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ.
ಮತ್ತಷ್ಟು
ಶ್ರೀನಗರ:ಅಜೀಜ್ ಗೋಲಿಬಾರ್‌‌ಗೆ ಬಲಿ-ಕರ್ಫ್ಯೂ ಜಾರಿ
ವೋಟಿಗಾಗಿ ನೋಟು: ಎಸ್ಪಿ ಸಂಸದಗೆ ಸಮನ್ಸ್
ಪಂಜಾಬ್ ಹೈ.ಕೋ ಮು.ನ್ಯಾಯಾಧೀಶರಾಗಿ ಠಾಕೂರ್
ಜಮ್ಮು: ಪೊಲೀಸರೊಂದಿಗೆ ವ್ಯಾಪಾರಿಗಳ ಘರ್ಷಣೆ, 1 ಸಾವು
ಸ್ವಾತಂತ್ರ್ಯ ದಿನಾಚರಣೆ: ದೆಹಲಿಯಲ್ಲಿ ಕಟ್ಟೆಚ್ಚರ
ಸಾಲ ಮನ್ನಾ ಫಲಾನುಭವಿಗಳಿಗೆ ಪ್ರಧಾನಿ ಪತ್ರ