ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ
ನಿಲ್ಲದ ಹಿಂಸಾಚಾರ, ಗೋಲಿಬಾರ್‌ಗೆ 10 ಆಹುತಿ
ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಿಸಿದ್ದು, ಪರಿಸ್ಥಿತಿಯ ನಿಯಂತ್ರಣ ಹಿಡಿತ ತಪ್ಪುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್, ಬುಧವಾರ ಮತ್ತೊಂದು ಸರ್ವಪಕ್ಷ ಸಭೆಗೆ ಕರೆ ನೀಡಿದ್ದಾರೆ.

ಮಂಗಳವಾರದಂದೂ, ಗೃಹಸಚಿವ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗದ ಸಭೆ ನಡೆಯಿತಾದರೂ, ಸಮಸ್ಯೆಯ ಪರಿಹಾರಕ್ಕಾಗಿ ರಾಜೀಸೂತ್ರ ಒಂದಕ್ಕೆ ಬರುವಲ್ಲಿ ಮತ್ತೊಮ್ಮೆ ಸೋಲಾಗಿದೆ.

ಜನತೆಯನ್ನು ತೃಪ್ತಿಪಡಿಸುವಂತಹ ಒಮ್ಮತದ ಅಭಿಪ್ರಾಯಕ್ಕೆ ಬರುವಲ್ಲಿ ನಾಯಕರು ಮಂಗಳವಾರದ ಸಭೆಯಲ್ಲೂ ವಿಫಲರಾಗಿದ್ದಾರೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 5ರಂದು ನಡೆದ ಸಭೆಯಲ್ಲಿ ಪ್ರಧಾನಿ ಸಿಂಗ್ ಅವರು ಶಾಂತಿಯನ್ನು ಕಾಪಾಡುವಂತೆ ಜನತೆಯನ್ನು ಮನವಿಮಾಡಿದ್ದು, ಹಿಂಸಾ ಜರ್ಜರಿತ ಜಮ್ಮುವಿಗೆ ಸರ್ವಪಕ್ಷಗಳ ನಿಯೋಗವನ್ನು ಕಳುಹಿಸಲು ನಿರ್ಧರಿಸಿದ್ದರು.

ಗೋಲಿಬಾರ್‌ಗೆ 10 ಬಲಿ
ಏತನ್ಮಧ್ಯೆ, ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿರುವ ಗೋಲಿಬಾರ್‌ನಲ್ಲಿ ಮಂಗಳವಾರ ಸತ್ತವರ ಸಂಖ್ಯೆ 10ಕ್ಕೇರಿದೆ.

ಸೋಮವಾರದ ಗೋಲಿಬಾರ್‌ನಲ್ಲಿ, ಪ್ರಮುಖ ಹುರಿಯತ್ ನಾಯಕ ಶೇಕ್ ಅಬ್ದುಲ್ ಅಜೀಜ್ ಸೇರಿದಂತೆ ಐದು ಮಂದಿ ಪ್ರತಿಭಟನಾಕಾರರು ಗುಂಡೇಟಿಗೆ ಬಲಿಯಾಗಿದ್ದಾರೆ.
ಮತ್ತಷ್ಟು
ಸೌದಿಯಲ್ಲಿ ಅನೀಸ್ ಇಬ್ರಾಹಿಂ ಬಂಧನ ?
ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ?
ಜಮ್ಮುವಿನಲ್ಲಿ ಮತ್ತೆ ಗೋಲಿಬಾರ್: 5 ಬಲಿ
ಅಮರನಾಥ: ಮತ್ತೆ ಸರ್ವಪಕ್ಷಗಳ ಸಭೆ
ಶ್ರೀನಗರ:ಅಜೀಜ್ ಗೋಲಿಬಾರ್‌‌ಗೆ ಬಲಿ-ಕರ್ಫ್ಯೂ ಜಾರಿ
ವೋಟಿಗಾಗಿ ನೋಟು: ಎಸ್ಪಿ ಸಂಸದಗೆ ಸಮನ್ಸ್