ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರದೊಳಕ್ಕೆ 800 ಉಗ್ರರ ನೆಲೆ: ಎಂಕೆಎನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದೊಳಕ್ಕೆ 800 ಉಗ್ರರ ನೆಲೆ: ಎಂಕೆಎನ್
ಬಾಹ್ಯ ಬೆಂಬಲದೊಂದಿಗೆ ಕಾರ್ಯಾಚರಿಸುತ್ತಿರುವ ಸುಮಾರು 800 ಭಯೋತ್ಪಾದನಾ ನೆಲೆಗಳನ್ನು ಗುಪ್ತಚರ ಏಜೆನ್ಸಿಗಳು ಪತ್ತೆಮಾಡಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಹೇಳಿದ್ದಾರೆ.

ರಾಷ್ಟ್ರದೊಳಗಿನ ಭಯೋತ್ಪಾದನಾ ಕೃತ್ಯಗಳಿಗೆ ದೊಡ್ಡಮಟ್ಟದಲ್ಲಿ ಬಾಹ್ಯ ಸ್ಫೂರ್ತಿ ಮತ್ತು ಬೆಂಬಲ ಇದೆ ಎಂದು ಹೇಳಿರುವ ಅವರು, ರಾಷ್ಟ್ರದೊಳಗಿನ ರೂವಾರಿಯ ಕುರಿತು ಚಿಂತಿತರಾಗಿದ್ದು, ಪತ್ತೆಗೆ ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

ಅವರು, 'ಸಿಂಗಪೂರ್ಸ್ ಸ್ಟ್ರೈಟ್ಸ್ ಟೈಮ್ಸ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ, ಬೆಂಗಳೂರು ಮತ್ತು ಅಹಮದಾಬಾದ್ ಸರಣಿಸ್ಫೋಟಗಳ ತನಿಖೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡುತ್ತಿದ್ದರು.

ಹಲವಾರು ಸಂಚುಕೋರರನ್ನು ಗುಪ್ತಚರ ಏಜೆನ್ಸಿಗಳು ಪತ್ತೆಹಚ್ಚಿದ್ದು, ಇವುಗಳು ಸಂಪೂರ್ಣ ವಿದೇಶಿಯಲ್ಲ ಎಂದು ಹೇಳಿರುವ ಅವರು, ಸ್ಪಷ್ಟವಾಗಿಯೂ ಸಂಘಟನೆ ಇದೆ. ಈ ಸಂಘಟನೆಯು ಸ್ಥಳೀಯವಾದದ್ದೇ ಇಲ್ಲ ಬಾಹ್ಯ ಗುಂಪುಗಳು ಕಾರ್ಯಾಚರಿಸುತ್ತಿವೆಯೇ ಎಂಬುದನ್ನು ಪತ್ತೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಆಹಮದಾಬಾದಿನಲ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಿರುವ ಕುರಿತು ನಾರಾಯಣನ್ ಕಳವಳ ವ್ಯಕ್ತಪಡಿಸಿದ್ದು, ಆಸ್ಪತ್ರೆಯನ್ನು ಉಗ್ರರು ಗುರಿಯಾಗಿರಿಸಿರುವುದು, ಇದು ಪ್ರಥಮ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.

ಬಾಂಬ್ ಸ್ಫೋಟದ ಬಳಿಕ ಆಸ್ಪತ್ರೆಯಲ್ಲಿ ಜನತೆ ಜಮಾಯಿಸುವ ಕಾರಣ, ಆಸ್ಪತ್ರೆಯ ಆವರಣದಲ್ಲಿ ವಾಹನಗಳಲ್ಲಿ ಬಾಂಬ್‌ಗಳನ್ನಿರಿಸುವುದು ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ
ಸೌದಿಯಲ್ಲಿ ಅನೀಸ್ ಇಬ್ರಾಹಿಂ ಬಂಧನ ?
ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ?
ಜಮ್ಮುವಿನಲ್ಲಿ ಮತ್ತೆ ಗೋಲಿಬಾರ್: 5 ಬಲಿ
ಅಮರನಾಥ: ಮತ್ತೆ ಸರ್ವಪಕ್ಷಗಳ ಸಭೆ
ಶ್ರೀನಗರ:ಅಜೀಜ್ ಗೋಲಿಬಾರ್‌‌ಗೆ ಬಲಿ-ಕರ್ಫ್ಯೂ ಜಾರಿ