ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು ಹಿಂಸೆಗೆ 13 ಬಲಿ - ಮತ್ತೆ ಸರ್ವಪಕ್ಷ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ಹಿಂಸೆಗೆ 13 ಬಲಿ - ಮತ್ತೆ ಸರ್ವಪಕ್ಷ ಸಭೆ
ಅಮರನಾಥ್ ಭೂ ವಿವಾದದ ಕಿಚ್ಚು ಮಂಗಳವಾರವೂ ಮುಂದುವರಿದ ಪರಿಣಾಮ ಕಾಶ್ಮೀರ ಪ್ರದೇಶವೊಂದರಲ್ಲೇ ರಕ್ಷಣಾ ಪಡೆಗಳ ಗೋಲಿಬಾರ್‌ಗೆ 13ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 10ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಸೋಮವಾರವಷ್ಟೇ ಹುರಿಯತ್ ಕಾನ್ಫರೆನ್ಸ್ ನಾಯಕ ಶೇಕ್ ಅಬ್ದುಲ್ ಅಜೀಜ್ ಅವರು ಪೊಲೀಸ್ ಗೋಲಿಬಾರ್‌ಗೆ ಬಲಿಯಾಗುವ ಮೂಲಕ ಹಿಂಸಾಚಾರ ಮತ್ತಷ್ಟು ಉಲ್ಭಣಿಸಲು ಕಾರಣವಾಗಿತ್ತು.

ದಿನದಿಂದ ದಿನಕ್ಕೆ ಕಣಿವೆ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದು,ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಚಿಂತೆಗೀಡು ಮಾಡಿದ್ದು, ಸಮಸ್ಯೆ ಇತ್ಯರ್ಥಕ್ಕಾಗಿ ಬುಧವಾರ ಮತ್ತೊಂದು ಸುತ್ತಿನ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯ ಎರಡು ಪ್ರದೇಶದ ಜನರಿಗೆ ಸಮ್ಮತವಾಗುವ ರೀತಿಯಲ್ಲಿ ಸೂತ್ರವೊಂದನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಅಮರನಾಥ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸಂಭವಿಸಿರುವ ಹಿಂಸಾಚಾರದ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿರುವುದಾಗಿ ಜಮ್ಮು-ಕಾಶ್ಮೀರ ಡಿಜಿಪಿ ಹೇಳಿದ್ದಾರೆ.
ಮತ್ತಷ್ಟು
ರಾಷ್ಟ್ರದೊಳಕ್ಕೆ 800 ಉಗ್ರರ ನೆಲೆ: ಎಂಕೆಎನ್
ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ
ಸೌದಿಯಲ್ಲಿ ಅನೀಸ್ ಇಬ್ರಾಹಿಂ ಬಂಧನ ?
ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ?
ಜಮ್ಮುವಿನಲ್ಲಿ ಮತ್ತೆ ಗೋಲಿಬಾರ್: 5 ಬಲಿ
ಅಮರನಾಥ: ಮತ್ತೆ ಸರ್ವಪಕ್ಷಗಳ ಸಭೆ