ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಹಮದಾಬಾದ್: ಸ್ಫೋಟ ಬಲಿಪಶುವಿನ ನೇತ್ರ ದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಾಬಾದ್: ಸ್ಫೋಟ ಬಲಿಪಶುವಿನ ನೇತ್ರ ದಾನ
ಕಳೆದ ತಿಂಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವು ಅನೇಕ ಮಂದಿಯ ಬಾಳಲ್ಲಿ ಕತ್ತಲೆಯನ್ನು ಮೂಡಿಸಿರಬಹುದು. ಆದರೆ, ಈ ಸ್ಫೋಟದ ಬಲಿಪಶುವೊಬ್ಬರು ಬೇರೊಬ್ಬರ ಬಾಳನ್ನು ಬೆಳಗಿದ್ದಾರೆ.

ಸರಣಿ ಬಾಂಬ್ ಸ್ಫೋಟದಲ್ಲಿ ಬಲಿಯಾಗಿರುವ ಮಧುಬನ್ ಖಾದಿ, ಆಸ್ಪತ್ರೆಯಲ್ಲಿ ಮೃತಪಡುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತನ್ನ ಗಂಡನಿಗೆ ಸೂಚಿಸಿದ್ದರು.

"ತನ್ನ ಕಣ್ಣುಗಳನ್ನು ದಾನ ಮಾಡಲು ಮಧುಬನ್ ಬಯಸಿದ್ದು, ಇದರಿಂದ ಇತರರ ಬಾಳು ಬೆಳಗಬಹುದು ಎಂದು ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಮಧುಬನ್ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ" ಎಂದು ಮಧುಬನ್‌ ಅವರ ಪತಿ ಜಗದೀಶ್ ಖಾದಿಯಾ ಹೇಳುತ್ತಾರೆ.

ಅಹಮದಾಬಾದಿನ ರಾಯಪುರದಲ್ಲಿ ಸಣ್ಣ ಸ್ಯಾಂಡ್‌ವಿಚ್ ಅಂಗಡಿಯನ್ನು ನಡೆಸುತ್ತಿರುವ ಜಗದೀಶ್ ಖಾದಿಯಾ ಅವರಿಗೆ ಸಹಕರಿಸಲು ಮಧುಬನ್ ತೆರಳಿದ್ದ ವೇಳೆ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ಮಧುಬನ್ ತೀವ್ರ ಗಾಯಗೊಂಡಿದ್ದರು.

ಮಧುಬನ್ ಅವರು ಇಲ್ಲಿನ ಜನರ ಮನದಲ್ಲಿ ಅಳಿಸಲಾಗದಂತಹ ನೆನಪನ್ನು ಉಳಿಸಿ ಹೋಗಿದ್ದಾರೆ ಎಂದು ಅಹಮದಾಬಾದ್ ಮಹಾನಗರ ಪಾಲಿಕೆ ಆರೋಗ್ಯ ಸಮಿತಿಯ ಅಧ್ಯಕ್ಷ ಮಯೂರ್ ದೇವ್ ತಿಳಿಸಿದ್ದಾರೆ.
ಮತ್ತಷ್ಟು
ಜಮ್ಮು ಹಿಂಸೆಗೆ 13 ಬಲಿ - ಮತ್ತೆ ಸರ್ವಪಕ್ಷ ಸಭೆ
ರಾಷ್ಟ್ರದೊಳಕ್ಕೆ 800 ಉಗ್ರರ ನೆಲೆ: ಎಂಕೆಎನ್
ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ
ಸೌದಿಯಲ್ಲಿ ಅನೀಸ್ ಇಬ್ರಾಹಿಂ ಬಂಧನ ?
ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ?
ಜಮ್ಮುವಿನಲ್ಲಿ ಮತ್ತೆ ಗೋಲಿಬಾರ್: 5 ಬಲಿ