ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವ ನಿಟ್ಟಿನಲ್ಲಿ, ಆಡಳಿತವು ಶ್ರೀನಗರದಲ್ಲಿ ಮೂರುಗಂಟೆಗಳ ಕಾಲ ಕರ್ಪ್ಯೂವನ್ನು ಸಡಿಲಗೊಳಿಸಿದೆ.
ಮುಂಜಾನೆ ಎಂಟು ಗಂಟೆಯಿಂದ 11 ಗಂಟೆಯವರೆಗೆ ಕರ್ಫ್ಯೂ ಸಡಿಲಗೊಳಿಸಲಾಗಿದ್ದು, ಈ ಮೂರು ಗಂಟೆ ಅವಧಿಯು ಶಾಂತವಾಗಿದ್ದಲ್ಲಿ ಸಡಿಲಿಕೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಪಡೆಗಳ ಗುಂಡುದಾಳಿಗೆ 12 ಮಂದಿ ಸಾವನ್ನಪ್ಪುವುದರೊಂದಿಗೆ ಜಮ್ಮು ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೆ ಏರಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಕಣಿವೆಯಾದ್ಯಂತ 13 ವರ್ಷಗಳ ಬಳಿಕ ಪ್ರಥಮ ಬಾರಿಗೆ ಪ್ರಾಧಿಕಾರವು ಕರ್ಫ್ಯೂ ವಿಧಿಸಿತ್ತು.
|