ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋರಾ ಅವರನ್ನು ಪದಚ್ಯುತಗೊಳಿಸುವಂತೆ ಮತ್ತು ಅಮರನಾಥ್ ದೇವಾಲಯಕ್ಕೆ ಜಮೀನು ಹಸ್ತಾಂತರಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಬುಧವಾರ ಎರಡು ಗಂಟೆಗಳ 'ಚಕ್ಕಾ ಜಾಮ್' ಪ್ರತಿಭಟನೆಗೆ ಕರೆ ನೀಡಿದೆ.

'ಚಕ್ಕಾ ಜಾಮ್' ಪ್ರತಿಭಟನೆಯ ಅಂಗವಾಗಿ ಅನೇಕ ಬಿಜೆಪಿ ಮತ್ತು ವಿಎಚ್‌ಪಿ ಕಾರ್ಯಕರ್ತರು ಅನೇಕ ಕಡೆ ರಸ್ತೆ ತಡೆ ನಡೆಸಿರುವ ಪರಿಣಾಮವಾಗಿ, ರಾಜಧಾನಿಯ ಅನೇಕ ಕಡೆಗಳಲ್ಲಿ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿದೆ.

ಜನನಿಬಿಡ ವಿಕಾಸ್ ಮಾರ್ಗ್, ಅಕ್ಷರಧಾಮ, ದೀಪಾಲಿ ಚೌಕ, ವಾಜಿರ್ಪುರ, ಮೂಲ್ಖಾಂಡ್ ಮತ್ತು ದೆಹಲಿ ಜೈಪುರ್ ಹೆದ್ದಾರಿಯ ಸಂಚಾರ ಪ್ರಕ್ರಿಯೆಯ ಮೇಲೆ ಈ ಪ್ರತಿಭಟನೆಯ ಬಿಸಿ ತಟ್ಟಿದೆ.

ಇಂದು ಒಂಬತ್ತು ಗಂಟೆಗೆ ಪ್ರಾರಂಭಗೊಂಡ ತಮ್ಮ ಎರಡು ಗಂಟೆಗಳ ರಸ್ತೆ ತಡೆಯ ವೇಳೆ ವಿಎಚ್‌ಪಿ ಕಾರ್ಯಕರ್ತರು ವಿಎಚ್‌ಪಿ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದರು.

ಪೂರ್ವ ದೆಹಲಿಯ ಲಕ್ಷ್ಮಿ ನಗರಕ್ಕೆ ಸಮೀಪವಾಗಿರುವ ನೋಯ್ಡಾದಲ್ಲಿ ಪ್ರತಿಭಟನೆಯ ನೇತೃತ್ವವನ್ನು ದೆಹಲಿಯ ಬಿಜೆಪಿ ಕೇಂದ್ರದ ಅಧ್ಯಕ್ಷ ಹರ್ಷವರ್ಧನ್ ವಹಿಸಿಕೊಂಡಿದ್ದಾರೆ. ಆಗ್ರಾದ ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿಗೂ ಪ್ರತಿಭಟನಾಕಾರರು ತಡೆಯೊಡ್ಡಿದ್ದಾರೆ.

ಅಮರನಾಥ್ ಮಂದಿರ ಮಂಡಳಿಗೆ ಜಮೀನು ಹಸ್ತಾಂತರಿಸುವಂತೆ ಒತ್ತಾಯಿಸಿ ವಿಎಚ್‌ಪಿ ಕಾರ್ಯಕರ್ತರ ಎರಡು ಗಂಟೆಗಳ ಈ ಪ್ರತಿಭಟನೆಯು 'ಚಲೋ ಅಯೋಧ್ಯಾ' ರೀತಿಯಲ್ಲಿಯೇ, ರಾಷ್ಟ್ರಾದ್ಯಂತ ಹರಡುವ ಸಾಧ್ಯತೆ ಇದೆ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.

"ಕಳೆದ 40 ದಿನಗಳಲ್ಲಿ ಜಮ್ಮುವಿನ ಜನಜೀವನವು ನಿಷ್ಕ್ರಿಯಗೊಂಡಿದ್ದು, ಪ್ರತಿಭಟನೆಯ ವೇಳೆ 11 ಹಿಂದೂಗಳು ಸಾವನ್ನಪ್ಪಿದ್ದಾರೆ. ಅಲ್ಪಸಂಖ್ಯಾತ ಜನರನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ವೋಟ್ ಬ್ಯಾಂಕ್ ರಾಜಕೀಯವನ್ನು ನಡೆಸುತ್ತಿದೆ" ಎಂದು ವಿಎಚ್‌ಪಿ ನಾಯಕ ಜುಗಲ್‌‌ಕಿಶೋರ್ ಆರೋಪಿಸಿದ್ದಾರೆ.
ಮತ್ತಷ್ಟು
ಶ್ರೀನಗರದಲ್ಲಿ ಕರ್ಫ್ಯೂ ಸಡಿಲಿಕೆ
ಹೊತ್ತಿ ಉರಿಯುತ್ತಿರುವ ಕಣಿವೆಯಲ್ಲಿ ಪ್ರತ್ಯೇಕತೆಯ ಕೂಗು
ಅಹಮದಾಬಾದ್: ಸ್ಫೋಟ ಬಲಿಪಶುವಿನ ನೇತ್ರ ದಾನ
ಜಮ್ಮು ಹಿಂಸೆಗೆ 13 ಬಲಿ - ಮತ್ತೆ ಸರ್ವಪಕ್ಷ ಸಭೆ
ರಾಷ್ಟ್ರದೊಳಕ್ಕೆ 800 ಉಗ್ರರ ನೆಲೆ: ಎಂಕೆಎನ್
ಜಮ್ಮು: 2ನೆ ಸರ್ವಪಕ್ಷ ಸಭೆಗೆ ಪಿಎಂ ಕರೆ