ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ
ಅಮರನಾಥ ವಿವಾದದ ಹಿನ್ನಲೆಯಲ್ಲಿ ಕಿಶ್ತಾವರದಲ್ಲಿ ಕೋಮುಗಲಭೆ ತಾರಕಕ್ಕೇರಿದ ಪರಿಣಾಮವಾಗಿ ಕಿಶ್ತಾವರ ಪ್ರದೇಶದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ.

ಪೊಲೀಸ್ ಗುಂಡುದಾಳಿಯಲ್ಲಿ ಗಾಯಗೊಂಡಿದ್ದ ಮೂವರು ಇಂದು ಮುಂಜಾನೆ ಮೃತಪಡುವ ಮೂಲಕ ಕಾಶ್ಮೀರ ಕಣಿವೆಯಲ್ಲಿನ ಆರ್ಥಿಕ ನಿರ್ಬಂಧದ ಕುರಿತಾದ ಪ್ರತಿಭಟನೆಯ ಹಿಂಸಾಚಾರದಲ್ಲಿ ಸಾವಿಗೀಡಾದವರ ಸಂಖ್ಯೆ 21ಕ್ಕೇರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ನಡುವೆ, ಶ್ರೀನಗರದ ಸಾಫಕಾದಲ್, ನಾವಾಕಾದಲ್, ಫತೇಕಾದಲ್, ಕರಣ್ ನಗರ್, ನತಿಪೋರಾ, ಚನಪೋರಾ ಮತ್ತು ಬೆಮಿನಾ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಮೇಲೆ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ.

ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ ನೀಡಿರುವುದನ್ನು ಪೊಲೀಸರು ಸಾರುತ್ತಿದ್ದಾರೆ ಮತ್ತು ಜನತೆ ಮನೆಯಿಂದ ಹೊರಗೆ ಕಾಲಿಡದಂತೆ ಆದೇಶ ನೀಡಲಾಗಿದೆ.

ಹೆಚ್ಚುವರಿ ಸೇನಾಪಡೆಗಳು, ಸಿಆರ್‌ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ಕಿಶ್ತಾವರದಲ್ಲಿ ನಿಯೋಜಿಸಲಾಗಿದ್ದು, ಅವರೆಲ್ಲ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದಾರೆ.

ಈ ಎಲ್ಲಾ ಘಟನೆಗಳ ನಡುವೆಯೂ, ಆವಶ್ಯಕ ವಸ್ತುಗಳನ್ನು ಖರೀದಿಸಲು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ, ಶ್ರೀನಗರದಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ.
ಮತ್ತಷ್ಟು
ಮುಂಬೈ: ಕಟ್ಟಡ ಕುಸಿದು 9 ಸಾವು
ಕಾನೂನು ಚೌಕಟ್ಟಿನಲ್ಲಿ ಬಂಧಿಯಾದ 'ಮಂಜಿ'
ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ
ಶ್ರೀನಗರದಲ್ಲಿ ಕರ್ಫ್ಯೂ ಸಡಿಲಿಕೆ
ಹೊತ್ತಿ ಉರಿಯುತ್ತಿರುವ ಕಣಿವೆಯಲ್ಲಿ ಪ್ರತ್ಯೇಕತೆಯ ಕೂಗು
ಅಹಮದಾಬಾದ್: ಸ್ಫೋಟ ಬಲಿಪಶುವಿನ ನೇತ್ರ ದಾನ