ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಗ ಬಣ್ಣದ ಟಿವಿ: ಈಗ ಸು.ಕೋ ನೋಟೀಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಗ ಬಣ್ಣದ ಟಿವಿ: ಈಗ ಸು.ಕೋ ನೋಟೀಸ್
PTI
ಚುನಾವಣೆ ಮುಂಚಿತವಾಗಿ ಮತದಾರರಿಗೆ ಉಚಿತ ಬಣ್ಣದ ಟಿವಿ ಮತ್ತು ಗ್ಯಾಸ್ ಸ್ಟೌವ್‌ಗಳನ್ನು ವಿತರಿಸುವ ಭರವಸೆ ನೀಡಿರುವ ಡಿಎಂಕೆಗೆ ಬುಧವಾರ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ.

ಡಿಎಂಕೆಯ ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷಗಳ ಇಂತಹ ಉಚಿತ ಕೊಡುಗೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪರೀಕ್ಷಿಸಲು ನಿರ್ಧರಿಸಿದೆ.

2,400 ಕೋಟಿ ರೂಪಾಯಿ ವೆಚ್ಚದಲ್ಲಿ ಬಣ್ಣದ ಟಿವಿಗಳನ್ನು ವಿತರಿಸುವ ಡಿಎಂಕೆ ಸರಕಾರ ಯೋಜನೆನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ದೂರಿನ ಹಿನ್ನೆಲೆಯಲ್ಲಿ ತಮಿಳ್ನಾಡು ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟೀಸ್ ನೀಡಿದೆ.

2006ರಲ್ಲಿ ನಡೆದ ತಮಿಳ್ನಾಡು ವಿಧಾನ ಸಭಾ ಚುನಾವಣೆಯ ವೇಳೆಗೆ ಡಿಎಂಕೆಯು, ಮತದಾರರಿಗೆ ಉಚಿತ ಬಣ್ಣದ ಟಿವಿ ಮತ್ತು ಗ್ಯಾಸ್ ಸ್ಟೌವ್‌ಗಳನ್ನು ವಿತರಿಸುವ ಭರವಸೆ ನೀಡಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಅರ್ಜಿಯನ್ನು ವಜಾಮಾಡಿತ್ತು. ಅರ್ಜಿದಾರರು ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಮತ್ತಷ್ಟು
ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ
ಮುಂಬೈ: ಕಟ್ಟಡ ಕುಸಿದು 9 ಸಾವು
ಕಾನೂನು ಚೌಕಟ್ಟಿನಲ್ಲಿ ಬಂಧಿಯಾದ 'ಮಂಜಿ'
ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ
ಶ್ರೀನಗರದಲ್ಲಿ ಕರ್ಫ್ಯೂ ಸಡಿಲಿಕೆ
ಹೊತ್ತಿ ಉರಿಯುತ್ತಿರುವ ಕಣಿವೆಯಲ್ಲಿ ಪ್ರತ್ಯೇಕತೆಯ ಕೂಗು