ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಕೆ
ಜನತೆಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗುವಂತೆ ಕಾಶ್ಮೀರ ಕಣಿವೆಯ ಒಟ್ಟು 10ರ ಆರು ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಶ್ರೀನಗರ್, ಗಂಧರ್ವಾಲ್, ಬಡ್ಗಂ, ಕುಪ್ವಾರ, ಅನಂತನಾಗ್ ಮತ್ತು ಕುಲ್ಗಮ್ ಜಿಲ್ಲೆಗಳಲ್ಲಿ ಮುಂಜಾನೆ ಆರು ಗಂಟೆಯಿಂದ ಹನ್ನೊಂದು ಗಂಟೆಯ ತನಕ ಕರ್ಫ್ಯೂ ಸಡಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಅಹಿತಕಾರಿ ಘಟನೆಗಳು ಸಂಭವಿಸದಿದ್ದಲ್ಲಿ ಕರ್ಫ್ಯೂ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅದಾಗ್ಯೂ, ಬಾರಮುಲ್ಲಾ, ಬಂಡಿಪುರ, ಪುಲ್ವಾಮ ಮತ್ತು ಸೋಪಿಯಾನ್‌ಗಳಲ್ಲಿ ಕರ್ಫ್ಯೂ ಮುಂದುವರಿದಿದೆ.

ಕಳೆದ ಹದಿಮೂರು ವರ್ಷಗಳಲ್ಲೇ ಕಾಶ್ಮೀರ ಕಣಿಯಲ್ಲಿ ಎಲ್ಲಾ ಹತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರುತ್ತಿರುವುದು ಇದೇ ಮೊದಲಾಗಿದೆ. ಜಮ್ಮುವಿನಲ್ಲಿ ನಡೆಯುತ್ತಿರುವ ಹಿಂಸಾಚಾರವು ಕಾಶ್ಮೀರಕ್ಕೂ ಹಬ್ಬಿದ್ದು, ಇದುವರೆಗೆ ಅಲ್ಲಿ ಕನಿಷ್ಠಪಕ್ಷ 21 ಮಂದಿ ಭದ್ರತಾ ಪಡೆಯ ಗೋಲಿಬಾರ್‌ಗೆ ಬಲಿಯಾಗಿದ್ದಾರೆ.
ಮತ್ತಷ್ಟು
ಪಾಕಿಸ್ತಾನಕ್ಕೆ ಬಾಯ್ಮುಚ್ಚಿರೆಂದ ಭಾರತ
ಆಗ ಬಣ್ಣದ ಟಿವಿ: ಈಗ ಸು.ಕೋ ನೋಟೀಸ್
ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ
ಮುಂಬೈ: ಕಟ್ಟಡ ಕುಸಿದು 9 ಸಾವು
ಕಾನೂನು ಚೌಕಟ್ಟಿನಲ್ಲಿ ಬಂಧಿಯಾದ 'ಮಂಜಿ'
ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ