ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಲಿ ಮಾಂಸ ಸೇವನೆ ಆಹಾರ ಬಿಕ್ಕಟ್ಟಿಗೆ ಪರಿಹಾರವಂತೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಲಿ ಮಾಂಸ ಸೇವನೆ ಆಹಾರ ಬಿಕ್ಕಟ್ಟಿಗೆ ಪರಿಹಾರವಂತೆ!
ನಿರಂತರ ಇಲಿ ಮಾಂಸ ಸೇವನೆಯಿಂದ ಜಾಗತಿಕ ಆಹಾರ ಬಿಕ್ಕಟ್ಟು ಪರಿಹರಿಸಲು ಸಾಧ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ಆಹಾರ ಮೆನುವಿನಲ್ಲಿ ಇಲಿ ಮಾಂಸವನ್ನು ಸೇರ್ಪಡೆಗೊಳಿಸುವ ಬಗ್ಗೆ ಯೋಜನೆ ನಡೆಸಿದ್ದಾರೆ.

ನಿರಂತರ ಇಲಿ ಮಾಂಸ ಸೇವನೆಯಿಂದ ಸಾಕಷ್ಟು ಆಹಾರ ಧಾನ್ಯಗಳನ್ನು ಉಳಿಸಬಹುದಾಗಿದೆ ಎಂದು ಬಿಹಾರದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ವಿಜಯ್ ಪ್ರಕಾಶ್ ತಿಳಿಸಿದ್ದಾರೆ.

ಇದು ಜಾಗತಿಕ ಆಹಾರ ಬಿಕ್ಕಟ್ಟನ್ನು ಪರಿಹರಿಸಲು ಸಹಾಯಕವಾಗಲಿದೆ. ಅಲ್ಲದೆ, ಹೆಚ್ಚು ಆಹಾರ ಧಾನ್ಯ ಅವಲಂಬಿಸುವುದನ್ನು ಇದು ತಪ್ಪಿಸುತ್ತದೆ ಎಂದು ಪ್ರಕಾಶ್ ಹೇಳಿದ್ದಾರೆ.

ರಸ್ತೆ ಬದಿಯ ಸ್ಟಾಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಫೈವ್ ಸ್ಟಾರ್ ಹೋಟೇಲ್‌ಗಳಲ್ಲಿ ಇಲಿ ಮಾಂಸ ಮಾರಾಟ ಪ್ರಾರಂಭಿಸುವ ಯೋಜನೆಯನ್ನು ಪ್ರಕಾಶ್ ಹೊಂದಿದ್ದಾರೆ.

ಹೋಟೇಲ್ ಮೆನುವಿನಲ್ಲಿ ಇಲಿ ಮಾಂಸ ಸೇರ್ಪಡೆಗೊಳಿಸುವಂತೆ ಪ್ರಮುಖ ಹೋಟೇಲ್‌ಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರಾದರೂ, ಈ ಕುರಿತಾಗಿ ಸಾರ್ವಜನಿಕ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಈ ಯೋಜನೆಯ ಬಗ್ಗೆ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಂದಿರುವ ಪ್ರಶ್ನೆಯಾಗಿದೆ. ಬಿಹಾರದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಇಲಿ ಮಾಂಸವನ್ನೇ ಸೇವಿಸುತ್ತಾರೆ. ಈ ಮಂದಿ ಇಲಿ ಮಾಂಸ ತಿನ್ನಲು ಸಾಧ್ಯವೆಂದಾದಲ್ಲಿ ಉಳಿದವರು ಯಾಕೆ ತಿನ್ನಬಾರದು" ಎಂಬುದಾಗಿ ಪ್ರಕಾಶ್ ಪ್ರಶ್ನಿಸಿದ್ದಾರೆ.

ಇಲಿ ಮಾಂಸವು ಗ್ರಾಮೀಣ ಜನರಲ್ಲಿ ಪೋಷಕಾಂಶದ ಕೊರತೆಯನ್ನು ಪರಿಹರಿಸಲು ಸಹಾಯವಾಗುತ್ತದೆ. ಇಲಿ ಮಾಂಸದಲ್ಲಿ ಸಾಕಷ್ಟು ಪ್ರೋಟೀನುಗಳಿವೆ ಎಂದು ಪ್ರಕಾಶ್ ಹೇಳಿದ್ದಾರೆ.
ಮತ್ತಷ್ಟು
ರಕ್ಷಣಾ ಪಡೆಗಳ ವೇತನ ಹೆಚ್ಚಳ
ರಾಜ್ಯಸಭಾಗೆ ರಂಗರಾಜನ್ ನಾಮನಿರ್ದೇಶನ
ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಕೆ
ಪಾಕಿಸ್ತಾನಕ್ಕೆ ಬಾಯ್ಮುಚ್ಚಿರೆಂದ ಭಾರತ
ಆಗ ಬಣ್ಣದ ಟಿವಿ: ಈಗ ಸು.ಕೋ ನೋಟೀಸ್
ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ