ಬಿಎಸ್ಪಿ ವರಿಷ್ಠೆ ಮಾಯಾವತಿ ಅವರ ಪ್ರಧಾನ ಮಂತ್ರಿ ಉಮೇದುವಾರಿಕೆಯನ್ನು ಒಪ್ಪಿಕೊಳ್ಳುವಲ್ಲಿ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಎಐಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತ ಹೇಳಿದ್ದು, ಮಾಯಾ ಆಸೆಗೆ ತುಪ್ಪ ಸುರಿದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ರೊಂದಿಗೆ ನಾಯಕತ್ವಕ್ಕೆ ಸಂಬಂಧಿಸಿದ ವಿಷಯಗಳ ಭಿನ್ನಾಭಿಪ್ರಾಯದಿಂದಾಗಿ ಇತ್ತೀಚೆಗಷ್ಟೇ ಯುಎನ್ಪಿಎ ಅಥವಾ ತೃತೀಯ ರಂಗದಿಂದ ಹೊರನಡೆದಿದ್ದ ಜಯಲಲಿತ ತಾವು ಎಡ ಮತ್ತು ಇತರ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಆದರೆ, ಆಶ್ಚರ್ಯಕರವೆಂಬಂತೆ ಮಾಯಾವತಿ ಪ್ರಧಾನಿಯಾಗುವ ಕುರಿತ ಯಾವುದೇ ರೀತಿಯ ಪ್ರಸ್ತಾವನೆಗಳನ್ನು ಸ್ವೀಕರಿಸಲು ಜಯಲಲಿತ ಸಿದ್ಧರಾಗಿದ್ದಾರೆ.
ತಮ್ಮ ಬಿಜೆಪಿ ಸಾಮೀಪ್ಯದ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಮಸೇತು ವಿವಾದದ ಕುರಿತಂತೆ ಸೈದ್ಧಾಂತಿಕ ಸಾಮ್ಯತೆಯನ್ನು ರಾಜಕೀಯ ಮೈತ್ರಿ ಎಂದು ಗ್ರಹಿಸಬಾರದೆಂದು ಜಯಲಲಿತ ಹೇಳಿದ್ದಾರೆ.
|