ಅಮರನಾಥ ಮಂದಿರ ಮಂಡಳಿಗೆ ಭೂಮಿ ಹಸ್ತಾಂತರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಕುದಿಯುತ್ತಿದ್ದರೆ, ಪ್ರತ್ಯೇಕತವಾದಿ ಚಳವಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ, ಆರ್ಥಿಕ ನಿರ್ಬಂಧವೆಂಬ ನಾಟಕವನ್ನು ಬಳಸಿಕೊಳ್ಳುತ್ತದೆ ಎಂಬುದಕ್ಕೆ ಬಲವಾದ ಸಾಕ್ಷಿಯಿದೆ ಎಂಬ ವಿಚಾರವನ್ನು ಭಾರತೀಯ ಗುಪ್ತಚರ ಸಂಸ್ಥೆಯು ಬಹಿರಂಗಪಡಿಸಿದೆ.
ಪ್ರತ್ಯೇಕವಾದಿ ನಿಷ್ಠರನ್ನು ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಜನರ ನಿಜವಾದ ಹಿತರಕ್ಷಕರು ಎಂದು ಬಿಂಬಿಸುವ ಸಲುವಾಗಿ, ಆರ್ಥಿಕ ನಿರ್ಬಂಧದ ಕುರಿತಾದ ವಿವಾದಿತ ಪ್ರತಿಭಟನೆಯನ್ನು ಐಎಸ್ಐ ತನ್ನ ಸ್ವಂತ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಉನ್ನತ ಮಟ್ಟದ ಮಾತುಕತೆಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿವೆ.
ಹುರಿಯತ್‌ಗೆ ತನ್ನ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಸ್ಥಳೀಯರು ಪಾಕಿಸ್ತಾನ ನಿಯಂತ್ರಣದ ಮುಜಾಫರಾಬಾದ್‌ನ್ನು ಪರ್ಯಾಯ ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ಏಜೆನ್ಸಿಯು ಸಹಕಾರ ನೀಡುತ್ತಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಅಸ್ತಿತ್ವದಲ್ಲಿರದ ಆರ್ಥಿಕ ನಿರ್ಬಂಧದ ಬಗ್ಗೆ ಪ್ರತಿಭಟನಾಕಾರರ ವಿರೋಧವನ್ನು ತಳ್ಳಿಹಾಕಿರುವ ಗೃಹ ಸಚಿವಾಲಯವು ಅಂಕಿಅಂಶವೊಂದನ್ನು ಬಿಡುಗಡೆಗೊಳಿಸಿದ್ದು, ಹುರಿಯತ್ ಬೆಂಬಲ ನಿರ್ಬಂಧವನ್ನು ಟ್ರಕ್ ಮತ್ತು ಹಣ್ಣು ಬೆಳೆಗಾರರು ಬೆಂಬಲಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.
ಇದರೊಂದಿಗೆ, ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿನ ಆರ್ಥಿಕ ನಿರ್ಬಂಧದ ವರಿದಗಳನ್ನೂ ಗೃಹ ಸಚಿವಾಲಯವು ನಿರಾಕರಿಸಿದೆ. ತೈಲ, ಅನಿಲ, ಔಷಧಗಳು ಮುಂತಾದ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಸುಮಾರು 236 ಟ್ರಕ್‌ಗಳು ಜಮ್ಮುವಿನಿಂದ ಜವಹಾರ್ ಸುರಂಗವನ್ನು ಇಂದು ಮುಂಜಾನೆ ದಾಟಿದೆ ಎಂದು ಗೃಹ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
|