ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶ್ರೀನಗರ: ಗೋಲಿಬಾರ್‌ಗೆ ಮತ್ತೊಂದು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀನಗರ: ಗೋಲಿಬಾರ್‌ಗೆ ಮತ್ತೊಂದು ಬಲಿ
ಶ್ರೀನಗರದ ಸಫಕಡಲ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಸಿಆರ್‌ಪಿಎಫ್ ಪಡೆಗಳು ಹಾರಿಸಿದ ಪರಿಣಾಮವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಇದೇ ಪ್ರದೇಶದ ಮೊಬೈಲ್ ದುರಸ್ತಿಗಾರ ಶಬೀರ್ ಅಹ್ಮದ್ ಹಂಡೂ ಎಂದು ಗುರುತಿಸಲಾಗಿದೆ.

ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರು, ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗುಂಪುಚದುಹಿಸಲು ಗುಂಡುಹಾರಾಟ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಏತನ್ಮಧ್ಯೆ, ನಗರದ ಹೊರವಲಯ ರಾವಲ್ಪೋರಾದಲ್ಲಿ ಪೊಲೀಸ್ ವಾಹನವನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ.

ಕಣಿವೆಯಲ್ಲಿನ ಆರ್ಥಿಕ ನಿರ್ಬಂಧದಲ್ಲಿ ಸಿಆರ್‌ಪಿಎಫ್ ಪಡೆಗಳ ಕೈವಾಡವನ್ನು ಆರೋಪಿಸಿ ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಮನೆಯ ಮುಂಬಾಗ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಧರಣಿ ಪ್ರಾರಂಭಿಸಿದ ಸ್ವಲ್ಪದರಲ್ಲೇ ಈ ಘಟನೆ ಸಂಭವಿಸಿದೆ.

ಶ್ರೀನಗರ-ಮುಜಾಫರಾಬಾದ್ ರಸ್ತೆಯನ್ನು ವ್ಯಾಪಾರಕ್ಕಾಗಿ ಮರುಪ್ರಾರಂಭಿಸುವ ಮತ್ತು ರಕ್ಷಣಾ ಪಡೆಗಳ ವಿಶೇಷ ಆಡಳಿತ(ಎಎಫ್ಎಸ್‌ಪಿ) ಕಾಯಿದೆಯನ್ನು ರದ್ದುಗೊಳಿಸುವುದು ಮುಂತಾದ ಬೇಡಿಕೆಗಳಿಗೆ ಕೇಂದ್ರ ಸರಕಾರವು ಧನಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ, ತನ್ನ ಪಕ್ಷವು 'ಜೈಲ್ ಬರೋ' ಚಳವಳಿಯನ್ನು ಪ್ರಾರಂಭಿಸಲಿದೆ ಎಂದು ಪಿಡಿಪಿ ನಾಯಕಿ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ಹುರಿಯತ್ ಸಹಾಯಕ್ಕೆ ಐಎಸ್ಐನಿಂದ 'ನಿರ್ಬಂಧ' ಬಳಕೆ
ಮಾಯಾವತಿ ಕನಸಿಗೆ ಜಯಲಲಿತ ಬಣ್ಣ
ಇಲಿ ಮಾಂಸ ಸೇವನೆ ಆಹಾರ ಬಿಕ್ಕಟ್ಟಿಗೆ ಪರಿಹಾರವಂತೆ!
ರಕ್ಷಣಾ ಪಡೆಗಳ ವೇತನ ಹೆಚ್ಚಳ
ರಾಜ್ಯಸಭಾಗೆ ರಂಗರಾಜನ್ ನಾಮನಿರ್ದೇಶನ
ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಕೆ