ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು ವಿವಾದ: ರಾಜ್ಯಪಾಲರಿಂದ ತುರ್ತು ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ವಿವಾದ: ರಾಜ್ಯಪಾಲರಿಂದ ತುರ್ತು ಸಭೆ
ಅಮರನಾಥ ದೇವಾಲಯಕ್ಕೆ ಜಮೀನು ಹಸ್ತಾಂತರ ಕುರಿತ ವಿವಾದವು ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿರುವುದರೊಂದಿಗೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸರ್ವಪಕ್ಷ ಸಭೆಯನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋರಾ ನಡೆಸಿದರು.

ಜಮ್ಮುವಿನಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಮತ್ತು ಇದರ ಪರಿಹಾರಕ್ಕೆ ದಾರಿ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಈ ಸಭೆಯನ್ನು ವೋರಾ ತುರ್ತಾಗಿ ಕರೆದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಬ್ದುಲ್ ರಹೀಂ ರಾತರ್(ನ್ಯಾಶನಲ್ ಕಾನ್ಫರೆನ್ಸ್), ಮೆಹಬೂಬಾ ಮುಫ್ತಿ (ಪಿಡಿಪಿ), ಸೋಫಿ ಯೂಸುಫ್ (ಬಿಜೆಪಿ), ಬಶೀರ್ ಅಹ್ಮದ್ ಕೋತೂ(ನ್ಯಾಶನಲ್ ಪಂತರ್ಸ್ ಪಾರ್ಟಿ), ಎಂ.ವೈ.ತರಿಗಾಮಿ(ಸಿಪಿಐಎಂ) ಮತ್ತು ಹಕೀಂ ಮಹಮ್ಮದ್ ಯಾಸೀನ್(ಪಿಡಿಎಫ್) ಮುಂತಾದ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದರೊಂದಿಗೆ, ಕಾಶ್ಮೀರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ರಿಯಾಜ್ ಪಂಜಾಬಿ ಮತ್ತು ಇಸ್ಲಾಮಿಕ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಸಿದ್ಧಿಕ್ ವಾಹಿದ್ ಅವರೂ ಈ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮತ್ತಷ್ಟು
ಶ್ರೀನಗರ: ಗೋಲಿಬಾರ್‌ಗೆ ಮತ್ತೊಂದು ಬಲಿ
ಹುರಿಯತ್ ಸಹಾಯಕ್ಕೆ ಐಎಸ್ಐನಿಂದ 'ನಿರ್ಬಂಧ' ಬಳಕೆ
ಮಾಯಾವತಿ ಕನಸಿಗೆ ಜಯಲಲಿತ ಬಣ್ಣ
ಇಲಿ ಮಾಂಸ ಸೇವನೆ ಆಹಾರ ಬಿಕ್ಕಟ್ಟಿಗೆ ಪರಿಹಾರವಂತೆ!
ರಕ್ಷಣಾ ಪಡೆಗಳ ವೇತನ ಹೆಚ್ಚಳ
ರಾಜ್ಯಸಭಾಗೆ ರಂಗರಾಜನ್ ನಾಮನಿರ್ದೇಶನ