ಆರನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅಂಕಿತ ಹಾಕುವ ಮೂಲಕ,ಸರ್ಕಾರಿ ನೌಕರರಿಗೆ ಸ್ವಾತಂತ್ರ್ಯೋತ್ಸವಕ್ಕೆ ವೇತನ ಹೆಚ್ಚಳದ ಬೋನಸ್ ಸಿಕ್ಕಂತಾಗಿದೆ.
ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಲ್ಲಿ ರಕ್ಷಣಾ ಇಲಾಖೆಯ ಉದ್ಯೋಗಿಗಳು ಸೇರಿದಂತೆ ಸರ್ಕಾರಿ ನೌಕರರ ಸಂಬಳವು ಶೇ.40ರಷ್ಟು ಹೆಚ್ಚಾಗುತ್ತದೆ. ತುಂಬಾ ಕಾಲದಿಂದ ಈ ವೇತನ ಆಯೋಗದ ವರದಿ ಜಾರಿಯಾಗದೆ ಧೂಳು ತಿನ್ನುತ್ತಿತ್ತು. ಇದೀಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ವೇತನ ಆಯೋಗ ವರದಿಗೆ ಅನುಮೋದನೆ ನೀಡುವ ನಿರ್ಧಾರ ಕೈಗೊಳ್ಳಲಾಯಿತು.
ವಿದೇಶಾಂಗ ಸಚಿನ ಪ್ರಣವ್ ಮುಖರ್ಜಿ, ರಕ್ಷಣಾ ಸಚಿವ ಎ.ಕೆ.ಆಂಟನಿ,ವಿತ್ತ ಸಚಿವ ಪಿ.ಚಿದಂಬರಂ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು.
6ನೇ ವೇತನ ಆಯೋಗದ ವರದಿ ಜಾರಿಗೆ ಬರುವ ಮೂಲಕ,ಸರ್ಕಾರಿ ನೌಕರರ ಬೇಸಿಕ್ ಸಂಬಳ 7ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ. ಕನಿಷ್ಠ ಹಂತದಲ್ಲಿರುವ ನೌಕರರ ಸಂಬಳವನ್ನು ಕನಿಷ್ಠ 10ಸಾವಿರ ರೂ.ಗಳಿಗೆ ನಿಗದಿ ಮಾಡಲಾಗಿದೆ.
ಮಧ್ಯಮ ಹಂತದ ರಕ್ಷಣಾ ಸಿಬ್ಬಂದಿಗೆ ಅತಿಹೆಚ್ಚು ಸಂಬಳ, ರಕ್ಷಣಾ ಮತ್ತು ಅರೆಸೇನಾ ಪಡೆ ಸಿಬ್ಬಂದಿಗೆ ಇನ್ನಷ್ಟು ರಿಯಾಯಿತಿಗಳು ದೊರೆಯುತ್ತದೆ.
|