ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಡೆಯದಿರಿ, ಒಂದಾಗಿ: ಪ್ರಧಾನಿ ಸಂದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಡೆಯದಿರಿ, ಒಂದಾಗಿ: ಪ್ರಧಾನಿ ಸಂದೇಶ
ಧರ್ಮದ ಹೆಸರಿನಲ್ಲಿ ಜನತೆಯಲ್ಲಿ ಒಡಕುಂಟುಮಾಡುವುದು ರಾಷ್ಟ್ರದ ಏಕತೆಗೆ ಬೆದರಿಕೆಯೊಡ್ಡಬಹುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಎಚ್ಚರಿಕೆ ನೀಡಿದ್ದು, ಜಮ್ಮು ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹುಡುಕಲು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಕರೆನೀಡಿದ್ದಾರೆ.

ಶಾಂತಿ ಸ್ಥಾಪನೆ ಮತ್ತು ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಲು ಸಹಕರಿಸುವಂತೆ ಅವರು ಜಮ್ಮು ಕಾಶ್ಮೀರದ ಜನತೆಯ್ನೂ ಈ ಸಂದರ್ಭದಲ್ಲಿ ಮನವಿ ಮಾಡಿದರು.

62ನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಏರ್ಪಡಿಸಿದ್ದ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಅಗತ್ಯವಸ್ತುಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ತನ್ನ ಸರಕಾರವು ಖಚಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನುಡಿದರು.

ಲಕ್ಷಾಂತರ ಸರಕಾರಿ ನೌಕರರಿಗೆ ಮತ್ತು ಸೇನಾ ಸಿಬ್ಬಂದಿಗಳಿಗೆ ಸಂತಸ ನೀಡಿರುವ ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತಂದಿರುವ ಕುರಿತು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ಪ್ರಧಾನಿ, ಸರಕಾರವು ಆಯೋಗದ ಶಿಫಾರಸ್ಸುಗಳನ್ನು ಮೀರಿ ವೇತನ ಹೆಚ್ಚಳ ಮಾಡಿದೆ ಎಂದು ನುಡಿದರು.

ಕೋಮುವಾದ, ಉಗ್ರವಾದ ಮತ್ತು ಮೂಲಭೂತವಾದದ ಸವಾಲುಗಳ ಬಗ್ಗೆ ನುಡಿದ ಸಿಂಗ್, 'ವೈರುಧ್ಯವಲ್ಲ, ಒಮ್ಮತದ ರಾಜಕೀಯ' ಬೇಕಾಗಿದೆ ಎಂದು ನುಡಿದರಲ್ಲದೆ, ಒಡೆದ ರಾಷ್ಟ್ರದಿಂದ ಇದನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ನುಡಿದರು.

45 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಅವರು ಕಳೆದ ತಿಂಗಳು ಕಾಬೂಲಿನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆಸಲಾದ ದಾಳಿಯು, ಪಾಕಿಸ್ತಾದ ಜತೆಗಿನ ಸಂಬಂಧಗಳನ್ನು ಸಹಜವಾಗಿಸುವ ಪ್ರಯತ್ನವನ್ನು ಮಸುಕಾಗಿರಿಸಿದೆ ಎಂದು ನುಡಿದರು.

ಉಗ್ರವಾದದ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ನವದೆಹಲಿಯು ಇಸ್ಲಾಮಾಬಾದಿನೊಂದಿಗೆ ಶಾಂತಿ ಉಪಕ್ರಮಗಳ ಕುರಿತು ಮುಂದುವರಿಯಲು ಸಾಧ್ಯವಾಗದು ಎಂದು ನುಡಿದರು.
ಮತ್ತಷ್ಟು
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ 'ಬೋನಸ್'
ಜಮ್ಮು ವಿವಾದ: ರಾಜ್ಯಪಾಲರಿಂದ ತುರ್ತು ಸಭೆ
ಶ್ರೀನಗರ: ಗೋಲಿಬಾರ್‌ಗೆ ಮತ್ತೊಂದು ಬಲಿ
ಹುರಿಯತ್ ಸಹಾಯಕ್ಕೆ ಐಎಸ್ಐನಿಂದ 'ನಿರ್ಬಂಧ' ಬಳಕೆ
ಮಾಯಾವತಿ ಕನಸಿಗೆ ಜಯಲಲಿತ ಬಣ್ಣ
ಇಲಿ ಮಾಂಸ ಸೇವನೆ ಆಹಾರ ಬಿಕ್ಕಟ್ಟಿಗೆ ಪರಿಹಾರವಂತೆ!