ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಸರಕಾರವು ಹಣದುಬ್ಬರ ನಿಯಂತ್ರಣಕ್ಕೆ ಸುದೃಢಕ್ರಮಗಳನ್ನು ಕೈಗೊಳ್ಳುತ್ತಿದೆಯೆಂದು ನುಡಿದರು.
ಐತಿಹಾಸಿಕ ಕೆಂಪುಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನದ ಭಾಷಣ ಮಾಡುತ್ತಿದ್ದ ಪ್ರಧಾನಿ, ಆದರೆ ಶೇ.10ರಷ್ಟು ಬೆಳವಣಿಗೆಗೆ ಅಡ್ಡಿಯಾಗುವ ಕ್ರಮಗಳ ವಿರುದ್ಧ ಅವರು ಎಚ್ಚರಿಸಿದರು. ರಾಷ್ಟ್ರವು ಕ್ಷಿಪ್ರಗತಿಯ ಬೆಳವಣಿಗೆಯ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ನಡುವೆ ಹಣದುಬ್ಬರದ ಸವಾಲನ್ನು ಎದುರಿಸುತ್ತಿದೆ ಎಂದು ಅವರು ನುಡಿದರು.
ಪ್ರತಿಯೊಬ್ಬರೂ ಇತ್ತೀಚಿನ ಬೆಲೆಗಳ ಏರಿಕೆ ಬಗ್ಗೆ ಆತಂಕಕ್ಕೆ ಒಳಗಾಗಿರುವುದು ತಮಗೆ ತಿಳಿದಿದೆ. ಬೆಲೆಗಳನ್ನು ಕೈಗೆಟಕುವ ರೀತಿ ನಿಯಂತ್ರಿಸಲು ಸುದೃಢ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿಎಂದು ಪ್ರಧಾನಿ ಸಿಂಗ್ ನುಡಿದರು.
ಆದರೆ ಆರ್ಥಿಕ ಬೆಳೆವಣಿಗೆಗೆ ಅಡ್ಡಿಯಾಗುವ ರೀತಿಯಲ್ಲಿ ಹಣದುಬ್ಬರ ನಿಯಂತ್ರಿಸುವ ಕ್ರಮಗಳ ವಿರುದ್ಧ ಅವರು ಎಚ್ಚರಿಸಿದ ಮನಮೋಹನ್ ಸಿಂಗ್, ಬಡತನನಿವಾರಣೆ ಮತ್ತು ಉದ್ಯೋಗ ಪ್ರಾಪ್ತಿ ಸಲುವಾಗಿ ನಮ್ಮ ಆರ್ಥಿಕತೆಯು ಪ್ರತಿವರ್ಷ ಶೇ.10ರ ದರದಲ್ಲಿ ಬೆಳೆಯಬೇಕು ಎಂದು ಅಭಿಪ್ರಾಯಿಸಿದರು.
|