ಪ್ರಧಾನಮಂತ್ರಿ ಅಭ್ಯರ್ಥಿಯ ಕುರಿತಾದ ಪ್ರಥಮ ಸ್ಪಷ್ಟ ಹೇಳಿಕೆಯೆಂಬಂತೆ, ಮುಂಬರುವ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರೇ ಪ್ರಧಾನಮಂತ್ರಿ ಅಭ್ಯರ್ಥಿ ಎಂಬ ಸ್ಪಷ್ಟ ಸುಳಿವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ್ದಾರೆ.
ಮುಂದಿನವರ್ಷವೂ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣವು ಮನಮೋಹನ್ ಸಿಂಗ್ ಅವರಿಂದಲೇ ನಡೆಯಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, "ಯಾಕಾಗಬಾರದು, ಖಂಡಿತವಾಗಿಯೂ" ಎಂದು ಉತ್ತರಿಸಿದರು.
ಇದೇ ಪ್ರಶ್ನೆಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್, "ಹಾಗಾಗಬಹುದು ಎಂಬ ಭರವಸೆ ಹೊಂದಿದ್ದೇನೆ" ಎಂದು ಹೇಳಿದರು.
ಪ್ರಸ್ತುತ ಅವಧಿಯ ತನ್ನ ಕೊನೆಯ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ನಂತರ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಕಾಂಗ್ರೆಸ್ ಕಚೇರಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|